Site icon PowerTV

‘ಅಬಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್ ನಾಗೇಶ್’

ಬೆಂಗಳೂರು: ಸಿಎಂ ಯಡಿಯೂರಪ್ಪನವರು ರಾಜೀನಾಮೆ ಕೇಳಿದರು ಕೊಟ್ಟಿದ್ದೇನೆ ಎಂದು ರಾಜೀನಾಮೆ ನೀಡಿದ ಬಳಿಕ ಹೆಚ್ ನಾಗೇಶ್ ಹೇಳಿದ್ದಾರೆ.

ಸಚಿವ ಸ್ಥಾನಕ್ಕೆ ಸಮನಾಂತರ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದಾರೆ. ನಾನು ಮನಪೂರ್ವಕವಾಗಿ ಸಿಎಂ ಯಡಿಯೂರಪ್ಪ ಅವರ ಮಾತಿನಂತೆ ರಾಜೀನಾಮೆ ಕೊಟ್ಟಿರುವೆ ಎಂದರು.

ಸಚಿವ ಸಂಪುಟ ಸಭೆ ಬಳಿಕ ಮೌನವಾದ ಹೆಚ್ ನಾಗೇಶ್. ಸಭೆಯಿಂದ ಬೇಸರದಿಂದ ಹೊರ ಬಂದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಹಾಗೆ ತೆರಳಿದ್ದಾರೆ. ಸಚಿವರು ಸಚಿವ ನಾಗೇಶ್ ರನ್ನು ವಿಧಾನಸೌಧದಲಿರುವ ಸಿಎಂ ಗೃಹ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಿಎಂ ಕಚೇರಿಯಲ್ಲಿ ಹೆಚ್ ನಾಗೇಶ್ ಗೆ ಮನವೊಲಿಸಲು ಪ್ರತ್ನಿಸಿದರು. ಆದರೆ ನಾಗೇಶ್ ಮಾತನಾಡಬೇಡಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವ ಸೋಮಶೇಖರಗೆ ಸೂಚನೆ ನೀಡಿದರು.  

Exit mobile version