Site icon PowerTV

ಇದೆ 13 ರಂದು ಪ್ರಮಾಣ ವಚನ ಸ್ವೀಕಾರ: ಲಕ್ಷ್ಮಣ ಸವದಿ

ಹುಬ್ಬಳ್ಳಿ: ನಿನ್ನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ಇದೇ 13 ರ ಸಂಜೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬಹುದು ಎಂದು ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, 7 ಜನರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ತೀರ್ಮಾನ ಆಗಿದೆ. ಸದ್ಯ  7 ಸ್ಥಾನಗಳು ಖಾಲಿಯಿದ್ವು. ಸಂಪುಟದಿಂದ ಯಾರನ್ನ ಕೈಬಿಡಲಿದ್ದಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಮುಂದೆ ಯಾರಿಗಾದರೂ ಸ್ಥಾನ ನೀಡುವಾಗ ಆಗ ಸಂಪುಟ ಪುನರಚನೆ ಆಗುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಸಂಪುಟ ವಿಸ್ತರಣೆ ಬಾಕಿಯಿತ್ತು. ಅದನ್ನ ಹೈಕಮಾಂಡ ಗಮನಿಸಿ ಇದೀಗ ಅವಕಾಶ ಕಲ್ಪಿಸಿದೆ. ಸಂಕ್ರಾಂತಿ ಗೆ ಎಲ್ಲವೂ ಒಳ್ಳೆಯದು ಆಗಲಿದೆ. ಯತ್ನಾಳ್ ಹೇಳಿದ ಹಾಗೆ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವೂ ಅವರನ್ನೆ ಕೇಳಬೇಕು ಎಂದರು.

ಸದ್ಯ ಸಂಪುಟ ಪುನಾರಚನೆ ಇಲ್ಲ ಎನ್ನುವ ಸುಳಿವನ್ನು ಲಕ್ಷ್ಮಣ ಸವದಿ ನೀಡಿದರು‌. ಹಾಲಪ್ಪ ಆಚಾರ್ ಮನೆಗೆ ನಾನು ಸಮಾನ್ಯವಾಗಿ ಭೇಟಿ ನೀಡಿದ್ದೆ. ಕೊಪ್ಪಳಕ್ಕೆ ಮದುವೆಗೆ ಹೋಗಿದ್ದೆ ದಾರಿ ಮದ್ಯೆ ಮನೆಗೆ ಕರೆದಿದ್ದರು. ಅದಿಕ್ಕೆ ಹೋಗಿದ್ದೆ. ಅವರು ಸಚಿವರಾದರೆ ಬಹಳ ಸಂತೋಷ ಎಂದರು.

Exit mobile version