Site icon PowerTV

ಪ್ರಧಾನಿ ಮೋದಿಗೆ ರೈತರ ಸಮಸ್ಯೆ ಬಗೆಹರಿಸುವ ತಾಕತ್ತಿಲ್ಲ: ಶಾಸಕ  ಕೃಷ್ಣಪ್ಪ

ತುರುವೇಕೆರೆ (ತುಮಕೂರು): ಪಟ್ಟಣದ ಬದರಿಕಾಶ್ರಮದ ಪಕ್ಕದಲ್ಲಿ ಆಯೋಜಿಸಿದ್ದ ಗ್ರಾ.ಪಂ ಚುನಾವಣೆಯಲ್ಲಿ ಸೋತ ಮತ್ತು ಗೆದ್ದವರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದ್ರು. ಪ್ರಧಾನಿಗೆ ರೈತರ ಸಮಸ್ಯೆ ಬಗೆಹರಿಸುವ ತಾಕತ್ತಿಲ್ಲ, ನಾಚಿಕೆ ಆಗಬೇಕು ನಲವತ್ತೈದು ದಿನವಾಯ್ತು ವಾಲಬಾದ್ ಮತ್ತು ದೆಹಲಿಯಲ್ಲಿ 40-50 ಸಾವಿರ ಜನ ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ. ಆದ್ರೆ ಅವರ ಬೇಡಿಕೆಯಾಗಿರೋ ಆರ್ ಎಂ ಸಿ ಅಮೆಟ್ಮೆಂಟ್ ಕ್ಯಾನ್ಸಲ್ ಮಾಡೋ ಮನಸ್ಸು ಮೋದಿಯವರಿಗೆ ಇಲ್ಲಾ ಆ ತಾಕತ್ತು ಇಲ್ಲ ಈ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಅಂದ್ರೆ ರೈತರ ಕಥೆ ಏನಾಗಬೇಕು. ಮೋದಿಗೆ ವೈಯಕ್ತಿಕವಾಗಿ ಮಾತನಾಡ್ತಿಲ್ಲ ಅವರ ಮೇಲೆ ಗೌರವ ಇದೆ ಆದ್ರೆ ರೈತರ ಸಮಸ್ಯೆ ಬಗೆಹರಿಸೋಕೆ ಅವರಿಗೆ ಆಗ್ತಾ ಇಲ್ಲಾ ಈ ರಾಷ್ಟ್ರದಲ್ಲಿ ರೈತರ ಸಮಸ್ಯೆ ಶೀಘ್ರ ಬಗೆಹರಿಸೋದು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಮಾತ್ರ ಅವರಿಗೆ ರೈತರ ಕಷ್ಟ ಗೊತ್ತು ಆಕ್ರೋಶ ವ್ಯಕ್ತಪಡೆಸಿದ್ದಾರೆ

Exit mobile version