Site icon PowerTV

ನಮ್ಮ ಜೊತೆ ಬಂದವರಿಗೆಲ್ಲಾ ಸಚಿವ ಸ್ಥಾನ ಸಿಗುತ್ತದೆ: ರಮೇಶ್ ಜಾರಕಿಹೊಳಿ

ದಾವಣಗೆರೆ: ಯಡಿಯೂರಪ್ಪನವರೇ ಎರಡುವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ದಾವಣಗೆರೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಜನವರಿ 13 ಅಥವಾ 14ಕ್ಕೆ ಸಂಪುಟ ವಿಸ್ತರಣೆಯಾಗುತ್ತೆ. ನಮ್ಮ ಜೊತೆ ಬಂದವರಿಗೆಲ್ಲ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ನಮ್ಮ ಜೊತೆ ಬಂದ 17 ಜನರನ್ನ ಕೈ ಬಿಡಲ್ಲ ಎಂಬ ವಿಶ್ವಾಸವಿದೆ. ಖಾತೆ ಬದಲಾವಣೆ, ವಿಸ್ತರಣೆ, ಪುನಾರಚಿಸುವುದು ಸಿಎಂ ಪರಮಾಧಿಕಾರ. 2023ರವರೆಗೂ ಬಿಜೆಪಿ ಇರುತ್ತದೆ. ಮುಂದೆ ನೋಡೋಣ ಎಂದು ದಾವಣಗೆರೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Exit mobile version