Site icon PowerTV

ಬಿಜೆಪಿ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟಿಸಲು ನಿರ್ಧಾರ : ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರದ ಧೋರಣೆ ವಿರೋಧಿಸಲು ಕಾಂಗ್ರೆಸ್ ಸಜ್ಜಾಗಿದೆ. ಪೆಟ್ರೋಲ್​​​ ಬೆಲೆ ಏರಿಕೆ, BBMP ನೂತನ ಟ್ಯಾಕ್ಸ್, ನಿರುದ್ಯೋಗ ಸಮಸ್ಯೆ, ಕಮಲ ನಾಯಕರ ಕಿತ್ತಾಟ, ಕೊರೋನಾದಿಂದ ಆಗುತ್ತಿರುವ ತೊಂದರೆ, ಹೀಗೆ ಆಡಳಿತ ಸರ್ಕಾರದ ವೈಪಲ್ಯಗಳ ಕುರಿತು ಸಮರ ಸಾರಲು ಕಾಂಗ್ರೆಸ್​​​ ನಾಯಕರು ರೆಡಿಯಾಗಿದ್ದಾರೆ.

ಸಂಕಲ್ಪ ಸಮಾವೇಶ ಮೂಲಕ ರಾಜ್ಯ ವಿಭಾಗವಾರು ಸಭೆ ಕರೆದು, ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಕ್ರೂಡಿಕರಿಸುತ್ತಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ಹಗರಣಗಳು, ಬಿಜೆಪಿ ಆಂತರಿಕ ಕಿತ್ತಾಟ ಮತ್ತು ನಿಷ್ಕ್ರಿಯಗೊಂಡಿರುವ ಆಡಳಿತ ಯಂತ್ರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಗವರ್ನಮೆಂಟ್ ಗೆ ಬಿಸಿ‌ ಮುಟ್ಟಿಸಲು ರಣತಂತ್ರ ಹೆಣೆಯಲಾಗುತ್ತಿದೆ. ಹಾಗೆ ಸ್ಥಳೀಯ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವೆಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಪ್ರತಿಭಟಿಸಲು ನಿರ್ಧಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

Exit mobile version