Site icon PowerTV

ಯತ್ನಾಳ್ ಒಬ್ಬ ಒಳ್ಳೆಯ ನಾಯಕ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಯತ್ನಾಳ್ ಹೇಳಿಕೆಗಳನ್ನು ರಾಜ್ಯ ನಾಯಕರು ಗಮನಿಸುತ್ತಿದ್ದಾರೆ.  ಈಗಾಗಲೇ, ಅವರನ್ನು ಕರೆದು ಬುದ್ಧಿ ಹೇಳುವ ಪ್ರಯತ್ನ ನಡೆಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 

ಇಂದು ಶಿವಮೊಗ್ಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ಯತ್ನಾಳ್ ಗೆ ಕರೆಸಿ ಮಾತನಾಡಿದ್ದೇನೆ.  ಇಂತಹ ಹೇಳಿಕೆಗಳು ಒಳ್ಳೆದಲ್ಲ ಅಂತಾ ಖಾರವಾಗಿಯೇ ಹೇಳಿದ್ದೇನೆ.  ನನ್ನ ಬಳಿ, ಅವರು ತಮ್ಮ ಹೇಳಿಕೆಗಳ ತಪ್ಪಿನ ಬಗ್ಗೆ ಒಪ್ಪಿಕೊಂಡಿದ್ದಾರೆ.  ಎಲ್ಲ  ಗೊತ್ತಿದ್ದರೂ ಕೂಡ, ಯಾಕೋ ಆ ರೀತಿ ಮಾತನಾಡುತ್ತಿದ್ದಾರೆ.  ಪಕ್ಷಕ್ಕೆ, ಸರ್ಕಾರಕ್ಕೆ ಡ್ಯಾಮೇಜ್ ಅಗುತ್ತೆ ಅಂತಾ ಅವರಿಗೂ ಗೊತ್ತಿದೆ.  ಆದರೂ ಅವರು ಇನ್ನೂ ತಿದ್ದಿಕೊಳ್ಳುತ್ತಿಲ್ಲ.  ಇರಲೀ ಅವರನ್ನು ಕರೆಸಿ ಮತ್ತೊಮ್ಮೆ ಮಾತನಾಡುತ್ತೇವೆ.  ಅವರ ಹೇಳಿಕೆಗಳು ಪಕ್ಷಕ್ಕೂ ಸಿರಿಯಸ್ ಆಗಬೇಕು ಜನರಿಗೂ ಸೀರಿಯಸ್ ಆಗಬೇಕು. 

ಬಹುಷಃ ಅವರ ಹೇಳಿಕೆಗಳು ಯಾರು ಕೂಡ ಸಿರೀಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ.  ಬಸವನ ಗೌಡ ಪಾಟೀಲ್ ಒಬ್ಬ ಕಠೋರ ಹಿಂದುತ್ವವಾದಿ.  ಅವರೊಬ್ಬ ಒಳ್ಳೆಯ ನಾಯಕ.  ಅದರಲ್ಲೇನು ಅನುಮಾನವಿಲ್ಲ. ಆದರೆ, ಯಾಕೋ ಅವರು ಅಲ್ಲೊಂದು ಇಲ್ಲೊಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಮತ್ತೊಮ್ಮೆ ಕರೆಸಿ ಮಾತನಾಡುತ್ತೇವೆ ಎಂದು ಶಿವಮೊಗ್ಗದಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

Exit mobile version