Site icon PowerTV

ಜೆಡಿಎಸ್ ಮುಖಂಡರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ: ವೈ.ಎಸ್.ವಿ. ದತ್ತಾ

ಶಿವಮೊಗ್ಗ: ಇತ್ತೀಚಿಗೆ ಸದನದಲ್ಲಿ ನಡೆದ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಮುಖಂಡರು ಸಹಿ ಹಾಕಿರುವುದಕ್ಕೆ ನನಗೆ ವಿರೋಧ ಇದೆ ಅಂತಾ ಜೆಡಿಎಸ್ ರಾಜ್ಯ ವಕ್ತಾರ ವೈ.ಎಸ್.ವಿ. ದತ್ತಾ ಹೇಳಿದ್ದಾರೆ. 

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆಗೂ ನಮ್ಮವರು ಸಹಿ ಹಾಕಿದ್ದಾರೆ.  ಈ ಬಗ್ಗೆಯೂ ನನಗೆ ಬೇಸರವಿದೆ.  ದೆಹಲಿಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದು ಘೋಷಿಸುವ ನಾವುಗಳು, ಇಲ್ಲಿ, ಸದನದಲ್ಲಿ, ಈ ಬಗೆಗಿನ ಕಾಯ್ದೆಗಳಿಗೆ ಏಕೆ ಸಹಿ ಮಾಡಬೇಕೆಂದು ಪ್ರಶ್ನಿಸಿದ್ದಾರೆ.  ಇದೊಂದು ರೀತಿಯಲ್ಲಿ ಇಬ್ಬಗೆಯ ನೀತಿಯಾಗಿದೆ.   ಬಿಜೆಪಿಗರ ತೀರ್ಮಾನಕ್ಕೆ ಸಹಿ ಹಾಕಿರುವುದಕ್ಕೆ ನನ ಅಸಮಾಧಾನವಿದೆ ಅಂತಾ ವೈ.ಎಸ್.ವಿ. ದತ್ತಾ ತಮ್ಮ ನೇರ ಮಾತುಗಳಿಂದ ಖಂಡಿಸಿದ್ದಾರೆ. ಮುಂದಿನ ದಿನಗಳಲ್ಲಿಯಾದರೂ, ನಮ್ಮ ಪಕ್ಷ ಸಿದ್ಧಾಂತಗಳನ್ನಾಧರಿಸಿಯೇ ಮುಂದುವರೆಯಬೇಕಿದೆ.  ನಮ್ಮ ಪಕ್ಷ ತಿದ್ದುಪಡಿ ಮಾಡಿರುವುದಕ್ಕೆ ಒಪ್ಪಿಗೆ ಸೂಚಿಸಿರುವುದಕ್ಕೆ, ನನ್ನ ವಿರೋಧ ಇದೆ ಎಂದು ವೈ.ಎಸ್.ವಿ. ದತ್ತಾ ಹೇಳಿಕೆ ನೀಡಿದ್ದಾರೆ.

ಇನ್ನೂ ಬಿಜೆಪಿ ಜೊತೆ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.  ಇದೀಗ ಈ ಪ್ರಶ್ನೆಯೇ ಉದ್ಭವವಾಗುವುದಿಲ್ಲ.  ಆದರೆ, ಸದ್ಯಕ್ಕೆ ನಮ್ಮ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂಬುದೇ ನನಗೆ ಸಮಾಧಾನವಾಗಿದೆ ಎಂದು ಹೇಳಿದ್ದಾರೆ. 

ಸದ್ಯ ಬಿಜೆಪಿ ಜೊತೆ ನಮ್ಮ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂಬುದೇ ನನಗೆ ಸಮಧಾನಕರ. ಮೂಲಭೂತ ತತ್ವಗಳಿಗೆ ಬದ್ಧವಾಗಿರುವ ಪಕ್ಷ ಜೆಡಿಎಸ್ ಆಗಿದ್ದು, ವೈಚಾರಿಕತೆ ಮತ್ತು ವೈಜ್ಞಾನಿಕವಾಗಿ, ನಮ್ಮ ಪಕ್ಷದ ಜೊತೆಗೆ ಬಿಜೆಪಿ ಹೊಂದಾಣಿಕೆ ಸರಿಯಾಗುವುದಿಲ್ಲ.  ದೇವೆಗೌಡರಿಗೆ ಈ ನಿರ್ಧಾರ ಕೂಡ ಇಷ್ಟವಿಲ್ಲ.  ದೇವೆಗೌಡರಿಗೆ ವಯಸ್ಸಾಗಿದ್ದರೂ, ಕ್ರೀಯಾಶೀಲರಾಗಿದ್ದಾರೆ.  ಅವರ ಅಭಿಪ್ರಾಯಗಳು ಕೂಡ ನಮ್ಮ ಅಭಿಪ್ರಾಯವೇ ಆಗಿದೆ ಎಂದು ನಾನು ತಿಳಿದುಕೊಂಡಿದ್ದೆನೆ.  ದೇವೆಗೌಡರೂ ಕೂಡ ಏನಾದರೂ ಕೈ ಚೆಲ್ಲಿ ಕುಳಿತುಬಿಟ್ಟರೆ, ಬಿಜೆಪಿ ಜೊತೆಗಿನ ಹೊಂದಾಣಿಕೆಗೆ ನಮ್ಮ ವಿರೋಧವಂತೂ ಇದ್ದೆ ಇದೆ ಎಂದು ದತ್ತಾ ನೇರವಾಗಿ ಹೇಳಿದ್ದಾರೆ.  ನಮ್ಮ ನಿರ್ಧಾರ ಅಚಲವಾಗಿದ್ದು, ಸದನದಲ್ಲಿ ನಮ್ಮ ನಾಯಕರು ಬಿಜೆಪಿಗರ ನಿರ್ಧಾರಕ್ಕೆ ಸಹಿ ಹಾಕಿರುವುದು ನನಗೆ ಅಸಮಾಧಾನವಿದೆ ಎಂದು ವೈ.ಎಸ್.ವಿ. ದತ್ತಾ ಹೇಳಿದ್ದಾರೆ.

 

Exit mobile version