Site icon PowerTV

ಗ್ರಾಮ ಪಂಚಾಯತಿ ಚುನಾವಣೆ  ಹಿನ್ನಲೆ ಪೋಲಿಸ್ ಬಂದೋ ಬಸ್ತ್​ : ಎಸ್ ಪಿ ಅನುಪಮ ಅಗರವಾಲ್

ವಿಜಯಪುರ:  ಜಿಲ್ಲೆಯ ಮೋದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಾಳೆ ನಡೆಯುವ ಹಿನ್ನಲೆಯಲ್ಲಿ ಎಲ್ಲಿಯೂ ಅಹಿತಕರ ಘಟನೆ ನಡೆಯಬಾರದೆಂದು ಬಿಗಿ ಪೋಲಿಸ್ ಬಂದೋ ಬಸ್ತ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಎಸ್ ಪಿ ಅನುಮಪ ಅಗರವಾಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ 8 ತಾಲೂಕುಗಳಲ್ಲಿ ಮೋದಲ ಹಂತದ ಚುನಾವಣೆ ನಡೆಯುತ್ತಿದೆ, ಇದರಲ್ಲಿ 4 ಜನ ಡಿವೈಎಸ್ಪಿ, 8 ಜನ ಇನ್ಸಪೆಕ್ಟರ್, 54 ಜನ ಸಬ್ ಇನ್ಸಪೆಕ್ಟರ್ ಹಾಗೂ ಎಎಸ್ಐ, 1500 ಜನ ಪೋಲಿಸ್, 300 ಜನ ಹೊಮ್ ಗಾರ್ಡ ಹಾಗೂ ಪ್ರತಿ ತಾಲೂಕಿನಲ್ಲಿ 2 ರಿಸರ್ವ ಪೋರ್ಸ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು. ಇನ್ನೂ 190 ಹೈಪರ್ ಸೆನ್ಸಿಟಿವ್ ಹಾಗೂ 218 ಸೆನ್ಸಿಟಿವ್ ಮತಗಟ್ಟೆಗಳೆಂದು ಗುರುತಿಸಿ ಅಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ಹೇಳಿದರು.

Exit mobile version