Site icon PowerTV

‘ಗ್ರಾಮ ಪಂಚಾಯಿತಿ ಚುನಾವಣೆ ಅಖಾಡದಲ್ಲಿ ಭಿಕ್ಷುಕ’..!

ಮೈಸೂರು: ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದಲ್ಲಿ, ಬೊಕ್ಕಹಳ್ಳಿ ಗ್ರಾಮದ ಅಂಕನಾಯಕ ಎಂಬುವವರು ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ್ದಾರೆ.

ಕಳೆದ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಊರುರು ತಿರುಗುತ್ತಾ, ಒಂದೊತ್ತಿನ ಊಟಕ್ಕೂ ಅಲೆಯುತ್ತಿದ್ದ ಬೊಕ್ಕಹಳ್ಳಿ ಗ್ರಾಮದ ಅಂಕನಾಯಕ ಭಿಕ್ಷುಕನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಒಲಿದು ಬಂದಿದೆ.

ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದಲ್ಲಿ ವಿನೂತನ ಪ್ರಯತ್ನ ಮಾಡಿದ್ದಾರೆ. ಹುಳಿಮಾವು ಗ್ರಾಮ ಪಂಚಾಯಿತಿ ಚುನಾವಣೆ ಕುತೂಹಲ ಕೆರಳಿಸಿದೆ. ಮೈಸೂರಿನಲ್ಲಿ ಭಿಕ್ಷುಕನಿಗೆ ವಿಜಯಲಕ್ಷ್ಮೀ ಒಲಿಯಬಹುದಾ ಎಂಬುದನ್ನು ಕಾದು ನೋಡಬೇಕಿದೆ.

Exit mobile version