Site icon PowerTV

ರಾಜಕೀಯ ದ್ವೇಷಕ್ಕೆ ರೈತನ ಬಣವೆ ಧಗಧಗ..!

ಗದಗ: ರಾಜಕೀಯ ದ್ವೇಷಕ್ಕೆ ರೈತ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಕ್ಕೆ ಬಣವೆಗೆ ಬೆಂಕಿ ಹಾಖಿರುವ ಘಟನೆ ಗದಗದ ಶಿರಹಟ್ಟಿ ತಾಲೂಕಿನ ಪರಸಾಪೂರ ಜಮೀನಿನಲ್ಲಿ ತಡ ರಾತ್ರಿ ಘಟನೆ ನಡೆದಿದೆ.

ಹನುಮಂತ ಬೇರಗಣ್ಣವರ್ ಅವರು ಮಾಗಡಿ ಗ್ರಾ.ಪಂ. ವ್ಯಾಪ್ತಿಯ ಪರಸಾಪೂರನಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ರಾಜಕೀಯ ದ್ವೇಷಕ್ಕೆ 5 ಎಕರೆ ಜಮೀನಿನಲ್ಲಿ ಇದ್ದ ಶೇಂಗಾ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಒಂದುವರೆ ಲಕ್ಷ ಮೌಲ್ಯದ ಶೇಂಗಾ ಬೆಳೆ ಸುಟ್ಟು ನಾಶವಾಗಿದೆ.

 ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ಈ ಸಂಬಂಧ  ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version