Site icon PowerTV

ಉ. ಕ. ಮಂದಿ ಕೈ ಹಿಡಿಯದಿದ್ದರೆ ರಾಜಕೀಯವಾಗಿ ಸಿದ್ದರಾಮಯ್ಯ ಗೋವಿಂದ ಆಗುತ್ತಿದ್ದರು: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ನಡುವೇ ಪೈಪೋಟಿ ಇದೆ. ಹೀಗಾಗಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತಿದ್ದರಿಂದ ದಿನಕ್ಕೊಂದು ಕಥೆ ಹೇಳುತ್ತಿದ್ದಾರೆ. 5  ವರ್ಷಗಳ ದುರಾಡಳಿತದಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಇಲ್ಲಿಯ ಜನರು ಕೈ ಹಿಡಿಯದಿದ್ದರೆ ಅವರು ರಾಜಕೀಯವಾಗಿ ಗೋವಿಂದ ಆಗುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಬದಾಮಿಯಲ್ಲಿಯೂ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಅಲ್ಲಿಯೂ ಸೋತಿದ್ದರೆ ಅವರ ರಾಜಕೀಯ ಜೀವನ ಕೊನೆಯಾಗುತ್ತಿತ್ತು. ದುರಾಡಳಿತ ಹಾಗೂ ಮೋದಿಯವರನ್ನು ಟಿಕ್ಕಿಸಿದ್ದು ಅವರ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದರು.

Exit mobile version