Site icon PowerTV

ನಕಲಿ ಕೀ ಯಿಂದ ಸಂಬಂಧಿಕರ ಮನೆಯಲ್ಲಿ ಕಳವು ಮಾಡಿದ್ದ ಆರೋಪಿಗಳು ಅರೆಸ್ಟ್.!

ಬೆಂಗಳೂರು: ನಕಲಿ ಕೀ ಮಾಡಿಕೊಂಡು ಸಂಬಂಧಿಕರ ಮನೆಯಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ‌. ಮನೆ ಮಾಲೀಕ ಸಲೀಂ ಪಾಷ ನೀಡಿದ ದೂರಿನ ಮೇರೆಗೆ ಇಮ್ರಾನ್ ಅಹ್ಮದ್, ಸಯ್ಯದ್ ಜಮೀದ್ ಹಾಗೂ ಅತ್ರಿಕ್ ಪಾಷಾ ಎಂಬುವರನ್ನು ಬಂಧಿಸಲಾಗಿದೆ. ₹4.50 ಲಕ್ಷ ಬೆಲೆ ಬಾಳುವ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ‌. ಡಿಸೆಂಬರ್ 14 ರಂದು ಸುದ್ದು ಗುಂಟೆಪಾಳ್ಯದ ಬಿಸ್ಮಿಲಾನಗರ ನಿವಾಸಿ ಸಲೀಂಪಾಷ ಮನೆಗೆ ನುಗ್ಗಿ ಖದೀಮರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದಾರೆ. ಈ ಸಂಬಂಧ ದೂರು ದಾಖಲಾಗಿತ್ತು.

ಸಂಬಂಧಿಕ ಸಲೀಂ ಪಾಷ ಮನೆಯಲ್ಲಿ ಚಿನ್ನಾಭರಣ ಇರುವುದನ್ನು ಅರಿತು ಮನೆಯ ಕೀಯನ್ನು ನಕಲಿ ಮಾಡಿಸಿಕೊಂಡಿದ್ದ. ಸಲೀಂ ಪಾಷನ‌ ಕುಟುಂಬ ಊರಿಗೆ ಹೋಗುತ್ತಿದ್ದಂತೆ ಆಲರ್ಟ್ ಆದ ಆರೋಪಿಗಳು ಮನೆಗೆ ಹೋಗಿ ಕಳ್ಳತನ‌ ಮಾಡಿದ್ದಾರೆ ಎಂದು‌ ಪೊಲೀಸರು ತಿಳಿಸಿದ್ದಾರೆ‌‌‌.

Exit mobile version