Site icon PowerTV

ನನ್ನನ್ನು ಹಣ ನೀಡಿ ಖರೀದಿಸೋ ವ್ಯಕ್ತಿ ಇನ್ನು ಹುಟ್ಟಿಲ್ಲ:ಓವೈಸಿ

ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡಿದ್ದ ಹೇಳಿಕೆಗೆ ಸಂಸದ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ AIMIM ಪಕ್ಷ, ಸದ್ಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರೋ ಮಮತಾ ಬ್ಯಾನರ್ಜಿ, ಮುಸ್ಲಿಂ ಮತಗಳನ್ನ ವಿಭಜಿಸಲು ಬಿಜೆಪಿ ಹಣ ನೀಡಿ ಹೈದರಾಬಾದ್​​​ನಿಂದ ಮತ್ತೊಂದು ಪಕ್ಷವನ್ನು ತರುತ್ತಿದೆ ಎಂದು ಆರೋಪಿಸಿದ್ರು. ಇದಕ್ಕೆ ಪ್ರತಿಕ್ರಿಸಿರೋ ಓವೈಸಿ, ನನ್ನನ್ನು ಹಣ ನೀಡಿ ಖರೀದಿಸೋ ವ್ಯಕ್ತಿ ಇನ್ನು ಹುಟ್ಟಿಲ್ಲ. ಮುಸ್ಲಿಮ್ ಮತದಾರರು ಮಮತಾ ಬ್ಯಾನರ್ಜಿಯವರ ಆಸ್ತಿಯಲ್ಲ. ಮಮತಾ ಬ್ಯಾನರ್ಜಿ ಅವರ ಎಲ್ಲಾ ಆರೋಪಗಳು ಆಧಾರ ರಹಿತವಾಗಿವೆ. ಆಕೆ ತನ್ನ ಮನೆಯ ಬಗ್ಗೆ ಆತಂಕ ಪಡೆಬೇಕಿದೆ, ಯಾಕಂದ್ರೆ, ಅಲ್ಲಿಂದಲೇ ಹಲವರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಲಹೆ ನೀಡಿದ್ದಾರೆ.

Exit mobile version