Site icon PowerTV

ರಾಜ್ಯದ ಜನರಿಗೆ ಜೆಡಿಎಸ್ ಏನು ಅನ್ನೋದು ಗೊತ್ತಾಗಲಿ: ನಾರಾಯಣ ಸ್ವಾಮಿ

ಬೆಂಗಳೂರು: ಕಾನೂನಾತ್ಮಕವಾಗಿ ಕಲಾಪ ಕರೆದದ್ದು ತಪ್ಪು. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.  ಅದು ಕಾನೂನಾತ್ಮಕವಾಗಿ ಸರಿಯಿಲ್ಲವಾದರೆ ತಪ್ಪಾಗಲಿದೆ ಹೀಗಾಗಿ ಇಂದಿನ ಅಜೆಂಡಾದಲ್ಲಿ ಹಾಕಿಲ್ಲ ಎಂದು ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. 2018ರಲ್ಲಿ 32 ಜನ ಸದಸ್ಯರು ಮಾತ್ರ ಇದ್ದರು. ಅಂದು ಜೆಡಿಎಸ್ ಗೆ ಉಪಸಭಾಪತಿ ಸ್ಥಾನ ಕೊಟ್ಟಿದ್ದೆವು. ಇವತು ಹೊಸ ನೋಟಿಸ್ ಕೊಡಬೇಕು. ಜೊತೆಗೆ ಉಪಸಭಾಪತಿ ರಾಜೀನಾಮೆ ಕೊಡಬೇಕು. ಬಿಜೆಪಿಯವರು ಕೊಟ್ಟಿರುವ ಅವಿಶ್ವಾಸ ಬಿದ್ದು ಹೋಗಿದೆ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.

ನಂತರ ಏನು ನಿರ್ಧಾರ ಮಾಡಬೇಕೋ ಅದನ್ನು ಮಾಡುತ್ತೇವೆ. ಬಿಜೆಪಿ ಸಪೋರ್ಟ್ ಬಗ್ಗೆ ಜೆಡಿಎಸ್ ಸ್ಪಷ್ಟಪಡಿಸಲಿ. ರಾಜ್ಯದ ಜನರಿಗೆ ಜೆಡಿಎಸ್ ಏನು ಅನ್ನೋದು ಗೊತ್ತಾಗಲಿ ಜೆಡಿಎಸ್ ನಡೆಗೆ ಪ್ರತಿಪಕ್ಷ ಸಚೇತಕ ನಾರಾಯಣ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version