Site icon PowerTV

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ ಮುನ್ನ ಸುದ್ದಿಗೋಷ್ಠಿ ನಡೆಸಿದ ಅವರು ಮತ್ತಷ್ಟು ಸಾಕ್ಷಿಗಳನ್ನು ನೀಡುವುದಾಗಿ ಹೇಳಿದರು.

ಅಲ್ಲದೇ ಇದೇ ವೇಳೆ ತಮ್ಮ ಅಕ್ಕ ಗೌರಿ ಲಂಕೇಶ್​ ಅವರನ್ನು ನೆನೆದು ಕಣ್ಣೀರಿಟ್ಟಿರು. ನನ್ನ ಅಕ್ಕ, ತಂದೆ ಕೊನೆಯ ಗಳಿಗೆವರೆಗೂ ಬರೆಯುತ್ತಲೇ ಸಾವನ್ನಪ್ಪಿದ್ದಾರೆ. ನಮ್ಮ ಅಕ್ಕನ ಸಾವು ಸಾವಲ್ಲ. ನಮ್ಮ ತಂದೆ ಮತ್ತು ಅಕ್ಕ ಕೊನೆತನಕ ಮಾಧ್ಯಮ ಕ್ಷೇತ್ರದ ಸೇವೆ ಮಾಡಿದ್ದಾರೆ. ನಮ್ಮ ಅಕ್ಕ ಒಂದು ಸಿದ್ಧಾಂತಕ್ಕೋಸ್ಕರ ಸಾವು ಅನುಭವಿಸ ಬೇಕಿತ್ತಾ? ಎಸ್​​​​​​​​​​​​ಐಟಿಗೆ ಹ್ಯಾಟ್ಸ್​​​ಆಪ್​​. ಗೌರಿ ಲಂಕೇಶ್ ಅವರ ಹಂತಕರು ಅರೆಸ್ಟ್ ಆಗಿದ್ದಾರೆ. ದಾಬೋಲ್ಕರ್​ ಮತ್ತು ಕಲಬುರ್ಗಿ ಹಂತಕರು ಅರೆಸ್ಟ್ ಆಗ್ಬೇಕು ಅಂದ್ರು.

ಇನ್ನು ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ ಅವರು, ಚಿತ್ರರಂಗ ಡ್ರಗ್ಸ್​ ಮಾಫಿಯಾ ಬಗ್ಗೆ ಎಚ್ಚೆತ್ತುಕೊಳ್ಳಬೇಕು.  ನನಗೆ ತಿಳಿದಿರುವ ಎಲ್ಲಾ ಮಾಹಿತಿಯನ್ನ ನೀಡಿದ್ದೇನೆ. ಸತ್ಯ ಹೇಳುವಾಗ ರಕ್ಷಣೆ ಬೇಡ, ಬೆಂಬಲ ಬೇಕು ಅಷ್ಟೇ. ನನಗೆ ಹಲವಾರು ನಟ-ನಟಿಯು ಬೆಂಬಲ ಕೊಟ್ಟಿದ್ದಾರೆ. ದುನಿಯಾ ವಿಜಯ್​, ಆದಿ ಲೋಕೇಶ್​​​ ಮಾತನಾಡಿದ್ದಾರೆ. ಸ್ಯಾಂಡಲ್​ವುಡ್​ನ ಕೆಲ ನಟರಿಂದ ಕಂಟಕ ಅಂಟಿದೆ. ಇಂದು ಸಿಸಿಬಿ ವಿಚಾರಣೆಯಲ್ಲಿ ಮಾಹಿತಿ ಕೊಡ್ತೇನೆ. ನನ್ನ ಬಳಿ ಇರುವ ಮಹತ್ವದ ದಾಖಲೆಗಳು ಕೊಡ್ತೇನೆ. ಕೆಲವರಿಂದ ಚಂದನವನಕ್ಕೆ ಕೆಟ್ಟ ಹೆಸರು ಬರಬಾರದು. ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಸಿಕ್ಕಿದೆ. ಶೇಕಡಾ 90ರಷ್ಟು ಚಿತ್ರರಂಗ ಕ್ಲೀನ್ ಆಗಿದೆ  ಎಂದರು.

 

Exit mobile version