Site icon PowerTV

ದೇಶದ ಒಳಿತಿಗಾಗಿ ವಿತ್ತ ಸಚಿವೆಯನ್ನು ಬದಲಾಯಿಸಿ : ಯು.ಟಿ ಖಾದರ್

ಮಂಗಳೂರು: ಜಿಡಿಪಿ ಐತಿಹಾಸಿಕ ಕುಸಿತಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರೇ ನೇರ ಕಾರಣ ಅಂತ ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಕೇಂದ್ರ ಹಣಕಾಸು ಸಚಿವೆಯ ವೈಫಲ್ಯದಿಂದಲೇ ಜಿಡಿಪಿ ಕುಸಿತವಾಗಿದೆ. ದೇಶಕ್ಕೆ ಒಳಿತು ಆಗಬೇಕಿದ್ದರೆ ನಿರ್ಮಲಾ ಸೀತಾರಾಮನ್ ಅವರನ್ನು ಬದಲಾಯಿಸಬೇಕು. ಕೇಂದ್ರ ಸರ್ಕಾರ ರಾಜ್ಯದ ಜಿಎಸ್ ಟಿ ಪಾಲನ್ನೂ ನೀಡಿಲ್ಲ. ರಾಜ್ಯದ ಹಕ್ಕನ್ನು ಪಡೆಯಲು ರಾಜ್ಯ ಸರ್ಕಾರ ಹೋರಾಡಬೇಕು. ರಾಜ್ಯದ ಹಕ್ಕಿಗಾಗಿ ಸಂಸದರು ಸೇರಿ ಸಂಸತ್ ಮುಂದೆ ಧರಣಿ ನಡೆಸಬೇಕಿದೆ. ರಾಜ್ಯದ ಹಕ್ಕನ್ನು ಪಡೆಯುವುದು ಸ್ವಾಭಿಮಾನ, ಗೌರವದ ಪ್ರಶ್ನೆಯಾಗಿದ್ದು, ಸರ್ಕಾರ ಅದನ್ನು ಪಡೆಯಬೇಕು ಅಂತ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

 -ಇರ್ಷಾದ್ ಕಿನ್ನಿಗೋಳಿ

Exit mobile version