Site icon PowerTV

ಕಲಾಸಿಪಾಳ್ಯ, ಕೆ.ಆರ್. ಮಾರುಕಟ್ಟೆ ಪುನಾರಂಭ !

ಬೆಂಗಳೂರು: ಲಾಕ್​ಡೌನ್​ನಿಂದ ಕಳೆದ 5 ತಿಂಗಳ ನಂತರ ಕೆ.ಆರ್​ ಮಾರ್ಕೆಟ್​ ಹಾಗೂ ಕಲಾಸಿಪಾಳ್ಯ ಮಾರ್ಕೆಟ್​ ಆರಂಭವಾಗಿದೆ. ಈಗಾಗಲೇ ಸಾನಿಟೈಸ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳಿಂದ ಓಪನ್​ ಮಾಡಲಾಗಿದೆ. ಅಲ್ಲದೆ ಪ್ರತಿ 10 ಅಂಗಡಿಗಳಿಗೆ ಒಬ್ಬ ಮಾರ್ಷಲ್​ ನೇಮಕ ಮತ್ತು ಸಾಮಾಜಿಕ ಅಂತರ, ಮಾಸ್ಕ ಧರಿಸುವುದು ಕಡ್ಡಾಯವಾಗಿದೆ.  ಅನ್ ಲಾಕ್ 4.O ಬಳಿಕ ಮೊದಲ ದಿನವೇ ವ್ಯಾಪಾರಸ್ಥರು  ತಮ್ಮ ವಹಿವಾಟನ್ನು ಜೋರಾಗೆ ಪ್ರಾರಂಭಿಸಿದ್ದಾರೆ. ಚುಮು ಚುಮು ತುಂತುರು ಮಳೆಯಲ್ಲೂ ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗೆ ಜಮಾಯಿಸಿದ್ದರು. ವ್ಯಾಪಾರಸ್ಥರ ಮುಖದಲ್ಲಿ ಕೊಂಚ ಖುಷಿ ತಂದಿದೆ.

Exit mobile version