Site icon PowerTV

ಯಶಸ್ಸು ತಲೆಗೆ ಹತ್ತಿದ್ರೆ ಹೀಗಾಗುತ್ತೆ : ಸುರೇಶ್ ರೈನಾ ವಿರುದ್ಧ ಶ್ರೀನಿವಾಸನ್ ಗರಂ..!

ಐಪಿಎಲ್​ಗೆ ದಿನಗಣನೆ ಶುರುವಾಗಿದೆ. ಅದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್​​ನ  ಆಧಾರಸ್ತಂಭವಾಗಿದ್ದ ಸುರೇಶ್​ ರೈನಾ ವೈಯಕ್ತಿಕ ಕಾರಣ ನೀಡಿ ದುಬೈನಿಂದ ವಾಪಸ್ಸಾಗಿದ್ದಾರೆ. ರೈನಾ ನಿರ್ಧಾರಕ್ಕೆ ಸಿಎಸ್​ಕೆ ಮಾಲೀಕ ಎನ್​. ಶ್ರೀನಿವಾಸನ್ ಫುಲ್ ಗರಂ ಆಗಿದ್ದಾರೆ ಎಂದು ಔಟ್​​ಲುಕ್​ ವರದಿ ಮಾಡಿದೆ.

“ಸುರೇಶ್ ರೈನಾ ತನ್ನ ನಿರ್ಧಾರಕ್ಕೆ ಖಂಡಿತಾ ಮರುಕ ಪಡುತ್ತಾರೆ. ತಾನು ಕಳೆದುಕೊಳ್ಳುವ ಸಂಗತಿಗಳು ಹಾಗೂ ಹಣದ ಬಗ್ಗೆ ಅವರು ಅರಿತುಕೊಳ್ಳಲಿದ್ದಾರೆ. ನನ್ನ ಅಭಿಪ್ರಾಯವೇನೆಂದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿರದಿದ್ದರೆ ಹಿಂತಿರುಗಿ. ನಾನು ಯಾರನ್ನೂ ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಹತ್ತಿದರೆ ಹೀಗಾಗುತ್ತದೆ’’ ಎಂದು ಶ್ರೀನಿವಾಸನ್ ಹೇಳಿರುವುದಾಗಿ ವರದಿಯಾಗಿದೆ.

ಸುರೇಶ್ ರೈನಾ ದುಬೈನಿಂದ ಭಾರತಕ್ಕೆ ವಾಪಸ್ಸು ಆಗುವ ಮುನ್ನ ವೈಯಕ್ತಿಕ ಕಾರಣಗಳನ್ನು ನೀಡಿ ವಾಪಸ್ಸಾಗಿದ್ದಾರೆಂದು ಸಿಎಸ್​ಕೆ ಹೇಳಿತ್ತು. ಆದರೆ, ಕುಟುಂಬದಲ್ಲಿ ನಡೆದ ಆಘಾತಕಾರಿ ಘಟನೆಯಿಂದ ರೈನಾ ಹಿಂತಿರುಗಿದ್ದಾರೆಂದು ವರದಿಯಾಗಿತ್ತು. ಈಗ ಶ್ರೀನಿವಾಸನ್ ರೈನಾ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ ಸಿಎಸ್​​ಕೆಯಲ್ಲಿ ಒಗ್ಗಟ್ಟು ಮುರಿದಿದೆಯಾ ಎಂಬ ಅನುಮಾನ ಎದುರಾಗುತ್ತಿದೆ.

Exit mobile version