Site icon PowerTV

ಲಕ್ಷ್ಮೀ ಕಂದಮ್ಮಳಿಗೆ ಧರ್ಮಸ್ಥಳದಲ್ಲಿ ಅದ್ಧೂರಿ ನಾಮಕರಣ…!

ದಕ್ಷಿಣ ಕನ್ನಡ : ಶ್ರೀ ಕ್ಷೇತ್ರ ಧರ್ಮಸ್ಥಳದ ಎರಡು ತಿಂಗಳ ಹೆಣ್ಣು ಆನೆಮರಿಗೆ ಇಂದು ಭಾರೀ ವೈಭವದ ಕಾರ್ಯಕ್ರಮದ ಮೂಲಕ ನಾಮಕರಣ ನೆರವೇರಿತು.‌ ಇಂದು ಬೆಳಿಗ್ಗೆಯಿಂದಲೇ ಆರಂಭವಾದ ನಾಮಕರಣ ಕಾರ್ಯಕ್ರಮವು ಕ್ಷೇತ್ರದಲ್ಲಿ ಹೊಸ ಕಳೆ ತುಂಬಿತ್ತು. ಮರಿ ಆನೆ ಹಾಗು ಅದರ ತಾಯಿ ಲಕ್ಷ್ಮೀ ಆನೆಯನ್ನ ಮದುಮಗಳಂತೆ ಸಿಂಗರಿಸಲಾಗಿತ್ತು. ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ ನಾಮಕರಣ ನಡೆಯಿತು.
ಆನೆ ಮರಿಗೆ “ಶಿವಾನಿ” ಎಂಬ ಹೆಸರಿಡಲಾಯಿತು. ಇನ್ನು ಶಿವಾನಿಯನ್ನ ವಿಶೇಷವಾಗಿ ಸಿಂಗರಿಸಲಾಗಿತ್ತು.‌ ಸಭಾಭವನ ಹಾಗೂ ದೇವಾಲಯ ವಠಾರ ತುಂಬಾ ನಲಿದಾಡಿದ ಆನೆ ಮರಿ, ನೀರಿನಲ್ಲಿ ಚೆಲ್ಲಾಟ ಆಡುವ ಮೂಲಕ ನೋಡುಗರ ಕಣ್ಮನ ಸೆಳೆಯಿತು. ಶಿವಾನಿಯ ತುಂಟಾಟಕ್ಕೆ ನೆರೆದವರೆಲ್ಲರೂ ಫಿದಾ ಆದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Exit mobile version