Site icon PowerTV

ಲಾಂಗ್ ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿದ್ದ ಪುಡಿ ರೌಡಿ

ಕೋಲಾರ :  ಮತ್ತೆ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದೆ. ಕೆಜಿಎಫ್ ನಲ್ಲಿ ಶನಿವಾರ ಮಧ್ಯರಾತ್ರಿ ಪುಡಿರೌಡಿಯೋರ್ವ ಲಾಂಗ್ ತೋರಿಸಿ ಸಾರ್ವಜನಿಕರನ್ನ ಬೆದರಿಸಿರುವ ಘಟನೆ ನಡೆದಿದೆ. ಸಲ್ಡಾನ ವೃತ್ತದ ಮದೀನ ವೈನ್ಸ್ ಬಳಿ ಕಿಡಿಗೇಡಿ ಲಾಂಗ್ ಹಿಡಿದು ಸಾರ್ವಜನಿಕರನ್ನ ಬೆದರಿಸಿದ್ದಾನೆ. ದಾರಿಹೋಕರು, ವಾಹನ ಸವಾರರನ್ನು ಅಡ್ಡಗಟ್ಟಿ ಲಾಂಗ್ ತೋರಿಸುತ್ತಿದ್ದ ಕಿರಾತಕ ಹಲ್ಲೆ ಮಾಡಲು ಮುಂದಾಗುತ್ತಿದ್ದ. ಆಗಸ್ಟ್ 26 ರಂದು ನಡು ರಸ್ತೆಯಲ್ಲಿ ಕೊಲೆಯಾದ ಸ್ಟಾಲಿನ್ ಸಹಚರ ಅಂತ ಪುಡಿ ರೌಡಿಯನ್ನ ಶಂಕಿಸಲಾಗಿದೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕಿಡಿಗೇಡಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

-ಆರ್.ಶ್ರೀನಿವಾಸಮೂರ್ತಿ

Exit mobile version