Site icon PowerTV

ಕಣ್ಣಿಗೆ ಖಾರದ ಪುಡಿ ಎರಚಿ ಹಾಡು ಹಗಲೇ ಯುವಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ವಿಜಯಪುರ : ಕಳೆದ ಬುಧವಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ‌ ಬೂದಿಹಾಳ ಗ್ರಾಮದಲ್ಲಿ ನಡೆದ ಯುವಕನ‌ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.‌ ದಲಿತನಾಗಿರುವ ಕಾರಣ ನಮ್ಮ ಸರಿ ಸಮಾನ ಕೂಡುತ್ತಿಯಾ ಎಂದು ಕೊಲೆ ಮಾಡಲಾಗಿದೆ ಎಂದು ಯುವಕನ ತಂದೆ ಆರೋಪಿಸಿದ್ದಾರೆ. ಬೂದಿಹಾಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆ ಮೇಲ್ವರ್ಗದವರು ನಮ್ಮ ಸಮನಾಗಿ ಕುಳಿತಿದ್ದ ಎಂಬ ಕಾರಣಕ್ಕೆ, ಹತ್ಯೆಗೆ ಎರಡು ದಿನ ಮುಂಚೆ ಗ್ರಾಮದಲ್ಲಿ ವಾಗ್ವಾದ ನಡೆದಿದೆ. ದಲಿತನಾಗಿ ಕಟ್ಟೆ ಮೇಲೆ ನಮ್ಮ ಸರಿ ಸಮನಾಗಿ ಕುಳಿತಿದ್ದ ಎಂಬ ಕಾರಣಕ್ಕೆ ಆರೋಪಿಗಳಾದ ಸಿದ್ದು ಬಿರಾದಾರ ಹಾಗೂ ಸಂತೋಷ ಹಿರ್ಲಾಕುಂಡ ಎಂಬುವರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಮುಗಿದ ಎರಡು ದಿನದ ಬಳಿಕ ಈತನ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಭರವಾಗಿ ಕೊಲ್ಲಲಾಗಿದೆ ಎಂದು ಯುವಕನ ತಂದೆ ಪ್ರಕರಣ ದಾಖಲಿಸಿದ್ದು ಇದನ್ನು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ…

Exit mobile version