Site icon PowerTV

ಕೊಪ್ಪಳ, ಎಸ್ಪಿಗೂ ಅಂಟಿದ ಕೊರೊನಾ,

ಕೊಪ್ಪಳ; ಕೊಪ್ಪಳದಲ್ಲಿ ಇಷ್ಟು ದಿನ‌ ರಾಜಕಾರಣಿಗಳಿಗೆ ಗಂಟು ಬಿದ್ದಿದ್ದ ಕೊರೊನಾ ಸೊಂಕು ಇದೀಗ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ‌ ಕೊರೊನಾ ಸೊಂಕು ದೃಢ ಪಟ್ಟಿದೆ.

ಇಲ್ಲಿಯವರೆಗೆ ಕೊಪ್ಪಳ ಜಿಲ್ಲೆಯ ಐದು ವಿದಾನಸಭೆ ಮತ‌ ಕ್ಷೇತ್ರದ ಪೈಕಿ ಕೊಪ್ಪಳ,ಯಲಬುರ್ಗಾ,ಗಂಗಾವತಿಯ ಶಾಸಕರಿಗೆ ಕೊರೊನಾ ಸೊಂಕು ತಗುಲಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಅಷ್ಟೇ ಅಲ್ಲದೆ ಜಿಲ್ಲೆ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಅವರಿಗೂ ಕೂಡ ಇತ್ತಿಚಗಷ್ಟೇ ಕೊರೊನ‌ ಸೊಂಕು ದೃಢ ಪಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಪ್ಪಳ ಜನ ಪ್ರತಿನಿಧಿಗಳನ್ನು ಬೆಂಬಿಡದೆ ಕಾಡುತಿದ್ದ ಕೊರೊನಾ ಇದೀಗ ಜಿಲ್ಲೆಯ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾದ ಜೆ.ಸಂಗೀತಾ ಅವರಿಗೂ ಸೊಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗ್ತಿವೆ. ಒಂದು ಕಡೆ ಕೊರೊನಾ ಸೊಂಕಿನಿಂದ ಸಾಕಷ್ಟು ರೋಗಿಗಳು ಗುಣಮುಖರಾಗ್ತಿದ್ರೆ, ಇನ್ನೊಂದು ಕಡೆ ಕೊರೊನಾ ಸೊಂಕಿನಿಂದ ಚಿಕ್ಕ ಚಿಕ್ಕ ವಯಸ್ಸಿನವರು ಸಹ ಬಲಿಯಾಗ್ತಿರೊದು ಜಿಲ್ಲೆಯ ಜನರನ್ನು ಆತಂಕಕ್ಕೆ ಇಡುಮಾಡಿದೆ. ಕೊರೊನಾದಿಂದ ಯಾರೂ ಭಯ ಪಡಬೇಕಾಗಿಲ್ಲಾ ನನ್ನ ಸಂಪರ್ಕಕ್ಕೆ ಇರುವವರು ಎಲ್ಲರೂ ತಪಾಸಣೆ ಮಾಡಿಸಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಕೊಪ್ಪಳ ಎಸ್ಪಿ ಜೆ.ಸಂಗೀತಾ ಮನವಿ ಮಾಡಿದ್ದಾರೆ.

-ಶುಕ್ರಾಜ ಕುಮಾರ್

Exit mobile version