Site icon PowerTV

ಕೋಲಾರದ ಕುರುಡುಮಲೆ ಗಣೇಶ, ಸೋಮೇಶ್ವರ ದೇಗುಲದ ಹುಂಡಿ ಎಣಿಕೆ

ಕೋಲಾರ : ಕೋಲಾರದ ಪುರಾಣ ಪ್ರಸಿದ್ದ ಕುರುಡುಮಲೆ ಗಣೇಶ, ಸೋಮೇಶ್ವರ ದೇಗುಲದ ಹುಂಡಿಗಳನ್ನ ಎಣಿಕೆ ಮಾಡಲಾಯಿತು. ಮುಳಬಾಗಿಲಿನ ಕುರುಡುಮಲೆಯಲ್ಲಿರುವ ಗಣೇಶ ಹಾಗೂ ಸೋಮೇಶ್ವರನ ಹುಂಡಿಯಲ್ಲಿ 11 ಲಕ್ಷ ರುಪಾಯಿ ಹಣ ಸಂಗ್ರಹವಾಗಿದೆ. ಪ್ರತಿ ವರ್ಷವೂ 25 ಲಕ್ಷ ರುಪಾಯಿ ಹಣ ಸಂಗ್ರಹವಾಗುತ್ತಿತ್ತು. ಆದ್ರೆ, ಕೊರೋನಾ ಕಾರಣಕ್ಕಾಗಿ ಭಕ್ತರು ದೇಗುಲಕ್ಕೆ ಬರಲಿಲ್ಲ, ಆದ್ದರಿಂದ ಹುಂಡಿ ಹಣ ಸಂಗ್ರಹದ ಪ್ರಮಾಣ ಇಳಿಮುಖವಾಗಿದೆ. ಜನವರಿಯಿಂದ ಆಗಸ್ಟ್ ವರೆಗೆ ಸಂಗ್ರಹವಾಗಿದ್ದ ಹಣವನ್ನ ಎಣಿಕೆ ಮಾಡಲಾಗಿದೆ. ಮುಳಬಾಗಿಲು ತಹಸೀಲ್ದಾರ್ ರಾಜಶೇಖರ್ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹುಂಡಿಗಳ ಎಣಿಕೆಯನ್ನ ನಡೆಸಿದರು.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

Exit mobile version