Site icon PowerTV

ಪೈಪ್ ಸರಿಮಾಡಲು ಹೋಗಿ ಕೆರೆಗೆ ಆಹಾರ ಆದ ರೈತ..!

ಚಿಕ್ಕಮಗಳೂರು : ಕೆರೆ ಬದಿಯ ಪೈಪ್ ಸರಿ ಮಾಡಲು ಹೋಗಿ ನೀರಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. 45 ವರ್ಷದ ರವಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆ ಬದಿಯಲ್ಲಿದ್ದ ನೀರಿನ ಪೈಪ್ ಸರಿ ಮಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಕೆರೆಯಲ್ಲಿ ಹತ್ತು ಅಡಿಗಿಂತ ಹೆಚ್ಚು ನೀರು ಇದ್ದಿದ್ದರಿಂದ ಮೇಲೆ ಬರಲು ಸಾಧ್ಯವಾಗದೇ ಕೆರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಗೆ ಪತ್ನಿ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದು, ಕುಟುಂಬದವರು ಇದೀಗ ಯಜಮಾನ ಕಳೆದುಕೊಂಡು ಕಂಗಾಲಾಗಿದೆ…

ಸಚಿನ್ ಶೆಟ್ಟಿ ಚಿಕ್ಕಮಗಳೂರು…

Exit mobile version