Site icon PowerTV

ಮರಿ ಆನೆಗೆ ”ಸುಧಾ” ಅಮ್ಮನ ಹೆಸರು.!

ಬನ್ನೇರುಘಟ್ಟ: ಹಲವು ಸಮಾಜ ಮುಖಿ ಕೆಲಸಗಳಿಂದ ಸಮಾಜಕ್ಕೆ ಏನಾದ್ರು ಒಂದು ಕೊಡುಗೆಯನ್ನ ನೀಡುತ್ತಾ ಬರುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ವ್ಯಕ್ತಿತ್ವದ ಸುಧಾಮೂರ್ತಿಯವರಿಗೆ  ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ವಿಶಿಷ್ಟವಾಗಿ ಗೌರವನ್ನ ಸೂಚಿಸಿದ್ದಾರೆ. ಹೌದು ಬೆಂಗಳೂರು ಕೂಗಳತೆ ದೂರದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇತ್ತೀಚೆಗಷ್ಟೇ 45 ವರ್ಷದ ಸುವರ್ಣ ಎಂಬ ಆನೆಯೂ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದು ತಾಯಿ ಹಾಗೂ ಮರಿಯಾನೆ ಮಾವುತರ ಹಾಗೂ ವೈದ್ಯರ ಹಾರೈಕೆಯಿಂದ ಆರೋಗ್ಯವಾಗಿವೆ. ಇದೀಗ ಮರಿಯಾನೆಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಅವರ ಹೆಸರನ್ನು ಇಡಲಾಗಿದೆ. ಇವರು ವನ್ಯಜೀವಿ ಸಂರಕ್ಷಣೆಯ ಕಾರಣಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಆಧ್ಯಕ್ಷರಾದ ಡಾ. ಸುಧಾಮೂರ್ತಿಯವರ ಕೊಡುಗೆ ಅಪಾರವಾಗಿರುವುದರಿಂದ “ಸುಧಾ” ಎಂದು ಹೆಸರಿಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಣಾದಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ. ಸುಧಾಮೂರ್ತಿಯವರು ವನ್ಯಜೀವಿಗಳ ಬಗ್ಗೆ ಅಪಾರ ಕಾಲಜಿ ಹೊಂದಿದ್ದಾರೆ. ಸುಧಾ ಎನ್ನುವ ಹೆಸರಿಡುವ ಬಗ್ಗೆ ಹಲವರಿಂದ ಅಭಿಪ್ರಾಯವೂ ಕೂಡ ಕೇಳಿಬಂದಿತ್ತು, ಈ ಹಿನ್ನೆಲೆಯಲ್ಲಿ ಮರಿಯಾನೆಗೆ ಸುಧಾ ಎಂದು ನಾಮಕರಣ ಮಾಡಲಾಗಿದೆ. ಇನ್ಪೋಸಿಸ್ ಪ್ರತಿಷ್ಠಾನದ ವತಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ, ಝೀಬ್ರಾ, ಹುಲಿ ಇರುವ ಪ್ರದೇಶಗಳಲ್ಲಿ ಬೇಲಿಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಪ್ರಾಣಿಗಳಿಗೆ ನೀರು ಸರಬರಾಜು ಮಾಡಲು ಕುಡಿಯುವ ನೀರನ್ನು ಒದಗಿಸಲು ಕೊಳವೆಬಾವಿಗಳನ್ನು ಕೂಡ ಕೊರೆಸಿಕೊಟ್ಟಿದ್ದಾರೆ. ಸದ್ಯ ತಾಯಿ ಮತ್ತು ಮರಿ ಎರಡು ಆರೋಗ್ಯವಾಗಿದ್ದು, ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಆನೆ ಮರಿ ಸೇರಿ ಒಟ್ಟು 25 ಆನೆಗಳನ್ನ ಉದ್ಯಾನವನದ ಸೀಗೆ ಕಟ್ಟೆ ಆನೆ ಬಿಡಾರದ ಒಂದೇ ಕಡೆ ವೀಕ್ಷಿಸಲು ಅವಕಾಶವಿದ್ದು ಈ ಆನೆಮರಿಗಳ ಚೆಲ್ಲಾಟ ಚಂದವೋ ಚಂದ ಎನ್ನಿಸುತ್ತದೆ

Exit mobile version