Site icon PowerTV

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಗ್ಯಾರೇಜ್..!

ಹುಬ್ಬಳ್ಳಿ : ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗ್ಯಾರೇಜ್ ಗೆ ಬೆಂಕಿ ಹತ್ತಿಕೊಂಡಿರುವ ಘಟನೆ ನಗರದ
ಬಿಡ್ನಾಳ ಕ್ರಾಸ್ ನಲ್ಲಿರುವ ನೋಬಲ್ ಪೇಂಟಿಂಗ್ ಗ್ಯಾರೇಜ್ ನಲ್ಲಿ ನಡೆದಿದೆ..

ಮುಲ್ಲಾ ಎಂಬುವವರಿಗೆ ಸೇರಿದ ಪೇಂಟಿಂಗ್ ಗ್ಯಾರೇಜ್ ಇದಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ  ಗ್ಯಾರೇಜ್ ನಲ್ಲಿದ್ದ ವಾಹನಗಳಿಗೆ ಮೊದಲು ಬೆಂಕಿ ಹತ್ತಿಕೊಂಡಿದೆ. ತದನಂತರ ಬೆಂಕಿ ಎಲ್ಲೆಡೆಯು ಹಬ್ಬಿ  ಒಂದು ಘಂಟೆಗೂ ಅಧಿಕ ಕಾಲ ಹೊತ್ತಿ ಉರಿದಿದೆ, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಹರಸಾಹಸ ಮಾಡಿದ್ದು. ಈ ಘಟನೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ ಎನ್ನಲಾಗುತ್ತಿದೆ, ಸದ್ಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version