Site icon PowerTV

ರಾಹುಲ್ ಗಾಂಧಿ ಪರ ರಮ್ಯಾ ಬ್ಯಾಟಿಂಗ್..!

ನವದೆಹಲಿ :  ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಟ್ಟದ ವಿಚಾರವಾಗಿ ನಡೆದ ಕಾರ್ಯಕಾರಣಿ ಸಭೆಯಲ್ಲಿ  ಅಸಮಧಾನ ಬುಗಿಲೆದ್ದಿದೆ. ಕಾಂಗ್ರೆಸ್ ನಾಯಕತ್ವದ ಬಗ್ಗೆ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ. ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ದೇಕೆ? ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್​ ನಾಯಕರು ಪತ್ರ ಬರೆದಿದ್ದಾರೆ ಅಂತ ರಾಹುಲ್ ಗಾಂಧಿ ಆರೋಪಿಸಿದ್ದಾರೆ ಅಂತ ತಿಳಿದುಬಂದಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾಜಿ ಸಂಸದೆ ದಿವ್ಯ ಸ್ಪಂದನಾ ( ರಮ್ಯಾ) ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ದಾರೆ. “ ಅವರುಗಳು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳಿಗೆ ಲೀಕ್ ಮಾಡಿಲ್ಲ. ಸಭೆಯಲ್ಲಿ ಚರ್ಚೆ ಆಗ್ತಿರೋ ಕ್ಷಣ ಕ್ಷಣದ ವಿಚಾರ ಹಾಗೂ ಸಂಭಾಷಣೆಯನ್ನು ಕೂಡ ಮಾಧ್ಯಮಗಳಿಗೆ ನಿರಂತರವಾಗಿ ನೀಡುತ್ತಿದ್ದಾರೆ. ಅದ್ಭುತ! ಅಂತ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ.

ಮಾಧ್ಯಮಗಳ ವಿರುದ್ಧ ಕಿಡಿ :   ರಮ್ಯಾ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ್ದಾರೆ. ಕೆಲವು ಕಾಂಗ್ರೆಸ್​ ನಾಯಕರು ಕೇವಲ ಬಿಜೆಪಿ ಜೊತೆ ಮಾತ್ರ ಒಪ್ಪಂದ ಮಾಡಿಕೊಂಡಿಲ್ಲ. ಮಾಧ್ಯಮಗಳ ಜೊತೆಯೂ ಒಪ್ಪಂದ ಮಾಡಿಕೊಂಡಂತಿದೆ. ಈ ವಿಚಾರವನ್ನು ಹೇಳುವುದರಲ್ಲಿ ರಾಹುಲ್ ತಪ್ಪು ಮಾಡಿದರು ಅಂತ ರಮ್ಯಾ ಟ್ವೀಟ್ ಮಾಡಿದ್ದಾರೆ.

https://twitter.com/divyaspandana/status/1297807236882808832

Exit mobile version