Site icon PowerTV

ಕೊರೋನಾ ಗೆದ್ದು ಬಂದ ತಂಗಿಗೆ ಅಣ್ಣನ ಭವ್ಯ ಸ್ವಾಗತ

ಬಳ್ಳಾರಿ : ಕೊರೋನಾ ಗೆದ್ದು ಬಂದ ಸಹೋದರಿಗೆ ಅಣ್ಣನೊಬ್ಬ ಭವ್ಯ ಸ್ವಾಗತ ನೀಡಿದ್ದಾನೆ. ಆಸ್ಪತ್ರೆಯಿಂದ ಬಂದ ತಂಗಿಗೆ ಹೂಮಳೆಗರೆದು ಜನರಿಗೆ ಊಟ ಹಾಕಿಸಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ತಂಗಿ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದರು. ಇದೀಗ ಗುಣಮುಖಳಾಗಿ ಬಂದ ತಂಗಿಗೆ ವಿಜೃಂಭಣೆಯ ಸ್ವಾಗತ ನೀಡಿದ್ದಾನೆ.

ಶ್ರೀರಾಮುಲು ಆಪ್ತ ಸಹಾಯಕ ರಾಮು ಈ ಕೆಲಸ ಮಾಡಿರುವ ಅಣ್ಣ. ಕೊರೋನಾ ಕಾರಣಕ್ಕೆ ಜನರ ಮದ್ಯೆ ಅಂತರ ಸೃಷ್ಠಿಯಾಗುತ್ತಿದೆ. ಅದು ಹೋಗಬೇಕು. ನಿಜವಾಗಿ ಮಾನವ ಸಂಬಂಧಗಳು ಗಟ್ಟಿಗೊಳ್ಳಬೇಕು ಎನ್ನುತ್ತಾರೆ ಅಣ್ಣ ರಾಮು.

-ಅರುಣ್ ನವಲಿ  

Exit mobile version