Site icon PowerTV

ಗಣೇಶ ವಿಸರ್ಜನೆ ವೇಳೆ ಪ್ರಾಣ ಕಳೆದುಕೊಂಡ ಯುವಕ !

ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಪಟ್ಟವರು ಗೋಪಿನಾಥ್ (18) ಎಂದು ತಿಳಿದುಬಂದಿದೆ.

ಊರಿನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹವನ್ನ ಮೆರವಣಿಗೆ ಮೂಲಕ ಕೆರೆಯಲ್ಲಿ ವಿಸರ್ಜಿಸಲು ಹೋಗಿದ್ದರು. ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜಿಸುವಾಗ ಯುವಕ ನೀರುಪಾಲಾಗಿದ್ದು, ಆತನನ್ನು ರಕ್ಷಿಸಲು ಗ್ರಾಮದ ಯುವಕರು ಮುಂದಾದ್ರೂ ಪ್ರಯೋಜನವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಆಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಶವವನ್ನು ಹೊರ ತೆಗೆದರು. ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

-ಆರ್.ಶ್ರೀನಿವಾಸಮೂರ್ತಿ

Exit mobile version