Site icon PowerTV

ರೋಹಿತ್ ಶರ್ಮಾ ಸೇರಿದಂತೆ ಐವರಿಗೆ ಖೇಲ್ ರತ್ನ..!

ನವದೆಹಲಿ : ಟೀಮ್ ಇಂಡಿಯಾ ಉಪ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರೀಡಾಪಟುಗಳಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ.  

ರೋಹಿತ್ ಶರ್ಮಾ, ಕುಸ್ತಿಪಟು ವಿನೇಶ್ ಫೋಗಾಟ್, ಪ್ಯಾರಾ ಅಥ್ಲಿಟ್ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್  ತಾರೆ ಮನಿಕಾ ಬಾತ್ರಾ ಮತ್ತು ಹಾಕಿ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾಗಿದೆ.

ಧರ್ಮೇಂದ್ರಾ ತಿವಾರಿ ( ಆರ್ಚರ್ ), ಪುರುಷೋತ್ತಮ್  ರೈ ( ಅಥ್ಲೆಟಿಕ್ಸ್), ಶಿವ ಸಿಂಗ್​ (ಬಾಕ್ಸಿಂಗ್), ರೂಮೇಶ್ ಪೋಥನಿಯಾ (ಹಾಕಿ) ಸೇರಿದಂತೆ 8 ಮಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಸೇರಿದಂತೆ 27 ಮಂದಿ ಕ್ರೀಡಾ ಸಾಧಕರಿಗೆ ಅರ್ಜುನ್ ಪ್ರಶಸ್ತಿ ಲಭಿಸಿದೆ.

ವೇಗಿ ಇಶಾಂತ್ ಶರ್ಮಾ ಸೇರಿ 27 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ..!

Exit mobile version