Site icon PowerTV

ಮೈಸೂರಿಗೆ ಮತ್ತೆ ಕ್ಲೀನ್ ಸಿಟಿ ಗರಿಮೆ..! | ಸಾಂಸ್ಕೃತಿಕ ನಗರದ ಜನತೆಯಲ್ಲಿ ಮನೆ ಮಾಡಿದ ಸಂಭ್ರಮ..!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಮತ್ತೆ ಸ್ವಚ್ಛನಗರಿ ಕಿರೀಟ ಅಲಂಕರಿಸಿದೆ. ಇಂದು ನಡೆದ ವರ್ಚುಯಲ್ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಮೈಸೂರಿಗೆ ಲಭ್ಯವಾಗಿದೆ. ಕ್ಲೀನ್ ಸಿಟಿ ಎಂದು ಘೋಷಣೆ ಮಾಡುತ್ತಿದ್ದಂತೆಯೇ ನಾಗರೀಕರಲ್ಲಿ ಸಂಭ್ರಮ‌ದ ಮನೆ ಮಾಡಿದೆ.

2019-20 ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಫಲಿತಾಂಶ ಇಂದು ಪ್ರಕಟವಾಗಿದೆ. ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯದಿಂದ ಹಮ್ಮಿಕೊಳ್ಳಲಾದ ನೇರ ಪ್ರಸಾರದಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. 1 ರಿಂದ 3 ಲಕ್ಷ, 3 ರಿಂದ 10 ಲಕ್ಷ ಹಾಗೂ 10 ಲಕ್ಷಕ್ಕೂ ಹೆಚ್ಚು ಕ್ಯಾಟಗರಿಯಲ್ಲಿ 2 ಸಾವಿರಕ್ಕೂ ಹೆಚ್ಚು ನಗರಗಳು ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. 2014 ಮತ್ತು 2015 ನೇ ಸಾಲಿನಲ್ಲಿ ಮೈಸೂರಿಗೆ ಮೊದಲ ಸ್ಥಾನ ಲಭ್ಯವಾಗಿತ್ತು. ಕಳೆದ ವರ್ಷ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಸಾಲಿನಲ್ಲಿ ಮತ್ತೆ ಮೊದಲ ಸ್ಥಾನ ಅಲಂಕರಿಸುವ ನಿರೀಕ್ಷೆ ಇತ್ತು. ಎಲ್ಲರ ನಿರೀಕ್ಷೆಯಂತೆ ಮೈಸೂರು 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಒಂದೇ ವ್ಯತ್ಯಾಸವೆಂದ್ರೆ ಕಳೆದ ವರ್ಷಗಳಲ್ಲಿ ಯಾವುದೇ ಕ್ಯಾಟಗಿರಿ ಇಲ್ಲದೆ ಮೊದಲ ಹಾಗೂ ಮೂರನೇ ಸ್ಥಾನ ಪಡೆದಿದ್ದ ಮೈಸೂರು ಇದೀಗ ಕ್ಯಾಟಗರಿ ಆಧಾರದ ಮೇಲೆ ಮೊದಲ ಸ್ಥಾನ ಪಡೆದಿದೆ. 2011 ರ ಜನಗಣತಿ ಆಧಾರದ ಜನಸಂಖ್ಯೆಗೆ ಅನುಗುಣವಾಗಿ ಈ ಪ್ರಶಸ್ತಿ ದೊರೆತಿದೆ. ಆದ್ರೆ 2021 ಕ್ಕೆ ಹೊಸ ಜನಗಣತಿಯ ಆಧಾರವನ್ನ ಪರಿಗಣಿಸಲಾಗುತ್ತದೆ. ಆಗ ಮೈಸೂರಿಗೆ ಹೊಸ ಸವಾಲುಗಳು ಎದುರಾಗುತ್ತದೆ. ಇದಕ್ಕೆ ಮೈಸೂರು ಸಜ್ಜಾಗಬೇಕಿದೆ.

3 ಲಕ್ಷದಿಂದ 10 ಲಕ್ಷ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಪಡೆದಿರುವ ಮೈಸೂರು ಮುಂದೆ ಕ್ಯಾಟಗರಿಯಲ್ಲಿ ಬದಲಾವಣೆ ಆಗುತ್ತದೆ. ಈಗಾಗಲೇ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ನೀಡಿರುವ 10 ಅಂಶಗಳನ್ನ ಸರಿಯಾಗಿ ಪಾಲಿಸಿದ್ರೆ ಮುಂದಿನ ವರ್ಷ 75 ನೇ ಸ್ವಾತಂತ್ರ ಸಂಭ್ರಮಕ್ಕೆ ಕೊಡುಗೆ ನೀಡಿದಂತಾಗುತ್ತದೆ.

ಒಟ್ಟಾರೆ ಕ್ಯಾಟಗರಿ ಆಧಾರದಂತೆ ಮೈಸೂರಿಗೆ ಮೊದಲ ಸ್ಥಾನ ಬಂದಿದೆ. ಮುಂದಿನ ವರ್ಷದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ ಆಧಾರದ ಮೇಲೆ ಅಭಿಯಾನದಲ್ಲಿ ಭಾಗವಹಿಸಬೇಕಿದೆ. ಮೊದಲ ಸ್ಥಾನ ಅಲಂಕರಿಸಬೇಕಿದ್ದಲ್ಲಿ ಅಧಿಕಾರಿಗಳು ಮತ್ತಷ್ಟು ಹೆಚ್ಚಿನ ಶ್ರಮ ಹಾಕಬೇಕಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಸಜ್ಜಾಗಬೇಕಿದೆ..

Exit mobile version