Site icon PowerTV

ಕಬಿನಿ ಜಲಾಶಯದ ಅಧಿಕಾರಿಗಳ ಗೋಲ್​ಮಾಲ್..?

ಮೈಸೂರು : ಗುತ್ತಿಗೆ ಕೆಲಸ ಕೊಡುವುದರಲ್ಲೂ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ. ನೇಮಕವಾದ ಗುತ್ತಿಗೆ ಕೆಲಸಗಾರರನ್ನ ಕೈಬಿಟ್ಟು ಹೊರಗುತ್ತಿಗೆ ಕಾರ್ಮಿಕರನ್ನ ಬಳಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಹೆಚ್.ಡಿ.ಕೋಟೆ ಕಬಿನಿ ಜಲಾಶಯದ ಅಧಿಕಾರಿಗಳ ಮೇಲೆ ಇಂತಹ ಆರೋಪ ಕೇಳಿ ಬಂದಿದೆ.

ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಲು ಇದೇ 21 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಕಬಿನಿ ಜಲಾಶಯಕ್ಕೆ ಆಗಮಿಸಲಿದ್ದಾರೆ. ಈ ಹಿನ್ನಲೆ ತೇಪೆ ಕೆಲಸಗಳನ್ನ ಮಾಡಿಸಲು 40 ಕ್ಕೂ ಹೆಚ್ಚು ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ನೇಮಕ‌ ಮಾಡಿಕೊಂಡ ಕಾರ್ಮಿಕರನ್ನ ಬಳಸಿಕೊಳ್ಳದೆ ಹೊರಗಿನ ಗುತ್ತಿಗೆದಾರರನ್ನ ಕರೆಸಿ ಕೆಲಸ ಮಾಡಿಸುತ್ತಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.

ನೇಮಕವಾದ ಗುತ್ತಿಗೆ ಕೆಲಸಗಾರರಿಗೆ ಸಂಬಳ ಭತ್ಯೆ ನೀಡಿಲ್ಲವೆಂದು ಆರೋಪಿಸಲಾಗಿದೆ. ಇಂತಹ ವೇಳೆಯಲ್ಲಿ ಹೊರಗಿನ ಕಾರ್ಮಿಕರಿಕರನ್ನು ಕರೆಸಿಕೊಂಡಿದ್ದು ಕಮಿಷನ್ ಆಮಿಷಕ್ಕಾಗಿ ಸ್ಥಳೀಯರು ಆರೋಪಿಸಿದ್ದಾರೆ. ಜಲಾಶಯದ ಕೆಲಸಕ್ಕಾಗಿ ಅಧಿಕಾರಿಗಳ ಜಾಣಕುರುಡು ವರ್ತನೆಗೆ ಸ್ಥಳೀಯರ ಆಕ್ರೋಷ ವ್ಯಕ್ತಪಡಿಸಿದ್ದಾರೆ.

Exit mobile version