Site icon PowerTV

ಗಲಭೆಯಲ್ಲಿ ಕೈವಾಡ ಇರುವವರ ಬಗ್ಗೆ ತನಿಖೆ ನಡೆಯುತ್ತಿದೆ : ಸಚಿವ ಎಸ್.ಟಿ.ಸೋಮಶೇಖರ್

ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲ ಮುಗಿದಿದ್ದು, ಅವ್ರು ಈಗೇನ್ ಚಾಲೆಂಜ್ ಮಾಡ್ತಾರೆ ಅಂತಾ ಕೋಲಾರದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ರು.

ಮಾಲೂರಿನಲ್ಲಿ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯ ಗಲಭೆಯ ಹಿನ್ನಲೆಯಲ್ಲಿ, ಎಸ್ಡಿಪಿಐ ಬ್ಯಾನ್ ಮಾಡುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವ್ರು, ಸಿದ್ದರಾಮಯ್ಯ ಅವ್ರು 5 ವರ್ಷ ಸಿಎಂ ಆಗಿದ್ದವ್ರು, ಈಗ ಅವ್ರ ಕಾಲ ಮುಗಿದಿದ್ದು ಈಗೇನ್ ಚಾಲೆಂಜ್ ಮಾಡ್ತಾರೆ ಅಂತಾ ಟಾಂಗ್ ಕೊಟ್ಟರು.

ಈಗಾಗಲೇ ಗಲಭೆ ಕುರಿತು ಅರವಿಂದ ಲಿಂಬಾವಳಿ ಗೃಹ ಮಂತ್ರಿಗಳಿಗೆ ವರದಿ ಕೊಟ್ಟಿದ್ದಾರೆ. ಗಲಭೆಯಲ್ಲಿ ಕೈವಾಡ ಇರುವವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಇಂತಹ ಘಟನೆಗಳಲ್ಲಿ ಯಾರೇ ತಪ್ಪು ಮಾಡಿದ್ದರೂ ಬಿಜೆಪಿ ಸೇರಿದಂತೆ ಎಲ್ಲರೂ ಬ್ಯಾನ್ ಆಗ್ಬೇಕು ಅಂತ ನಿರ್ಧರಿಸಿದ್ದಾರೆ ಎಂದರು.

ಒಂಬತ್ತು ಜಿಲ್ಲೆಗಳಲ್ಲಿ ನೆರೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಅಂತ ಹೇಳಿದ ಸಚಿವರು, ಕೇಂದ್ರ ಸರ್ಕಾರದ ಟೀಂ ಬಂದ ತನಿಖೆ ನಡೆಸಿ ಪರಿಹಾರ ಬಿಡುಗಡೆ ಮಾಡ್ತಾರೆ ಎಂದರು.

-ಆರ್.ಶ್ರೀನಿವಾಸಮೂರ್ತಿ

Exit mobile version