Site icon PowerTV

ಸಿಎಂ ಭೇಟಿಗೆ ಬರುವ ಸಾರ್ವಜನಿಕರಿಗೆ ಕೊವಿಡ್ ಟೆಸ್ಟ್ ಕಡ್ಡಾಯ!

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಬರುವ ಸಾರ್ವಜನಿಕರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲೇ ಬೇಕು. ಸಿಎಂ ಭೇಟಿಗೆ ಬರುವ ಸಾರ್ವಜನಿಕರಿಗೆ ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ನಡೆಸಲು ಮಂಡ್ಯ ಡಿಸಿ ಸೂಚಿಸಿದ್ದಾರೆ.

ಇದೇ 21ರ ಗೌರಿ ಹಬ್ಬದಂದು ಸಿಎಂ ಬಿಎಸ್ವೈ KRS ಅಣೆಕಟ್ಟೆಗೆ ಆಗಮಿಸಿ ಬಾಗಿನ ಸಲ್ಲಿಸಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ KRS ಅಣೆಕಟ್ಟೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 
ಹೆಲಿಪ್ಯಾಡ್ ಗಳು, ಬಾಗಿನ ಅರ್ಪಿಸುವ ಸ್ಥಳ, ಡ್ಯಾಂ, ಕಾರ್ಯಕ್ರಮದ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು, ಬಿಗಿ ಪೊಲೀಸ್ ಭದ್ರತೆಗೆ ಸೂಚಿಸಿದ್ರು. ಇದೇ ವೇಳೆ ಸಿಎಂ ಭೇಟಿಗೆ ಹಾಗೂ ಮನವಿ ಸಲ್ಲಿಸಲು ಬರುವ ಎಲ್ಲಾ ಸಾರ್ವಜನಿಕರಿಗೂ ಕಡ್ಡಾಯವಾಗಿ ಸ್ಥಳದಲ್ಲೇ ರ್‍ಯಾಪಿಡ್ ಟೆಸ್ಟ್ ಮೂಲಕ ಕೊವಿಡ್ ಪರೀಕ್ಷೆ ಮಾಡುವಂತೆ ಸ್ಥಳದಲ್ಲಿದ್ದ ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

– ಡಿ.ಶಶಿಕುಮಾರ್

Exit mobile version