Site icon PowerTV

ಸಂಸದ ಸಂಗಣ್ಣ ಕೊರೋನಾ ಪಾಸಿಟಿವ್ 

ಕೊಪ್ಪಳ: ಜನಪ್ರತಿನಿಧಿಗಳನ್ನು ಬಿಡದೆ ಕೊರೋನಾ ಸೋಂಕು ಕೊಪ್ಪಳ ಸಂಸದರಿಗೂ ಇದೀಗ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ಜಿಲ್ಲೆಯಲ್ಲಿ ಈಗಾಗಲೇ ಯಲಬುರ್ಗಾ,ಕೊಪ್ಪಳ, ಗಂಗಾವತಿ ಶಾಸಕರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಸಂಸದ ಸಂಗಣ್ಣ ಕರಡಿಗೂ ಸೋಂಕು ದೃಢ ಪಟ್ಟಿದ್ದು ಖುದ್ದು ಸಂಸದರೆ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದ್ದು ವ್ಯದ್ಯರ ಸಲಹೆಯಂತೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ತುರ್ತು ಕೆಲಸಗಳಿಗೆ ನನ್ನ ದೂರವಾಣಿಗೆ ಕರೆ ಮಾಡಿ ಸಂಪರ್ಕಿಸಿ ಎಂದು ಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಿಗೆ ಕರೆ ನೀಡಿದ್ದಾರೆ.

-ಶುಕ್ರಾಜ ಕುಮಾರ್

Exit mobile version