Site icon PowerTV

ಸಹೋದರರನ್ನು ಬಲಿ ಪಡೆದ ಕೊರೋನಾ

ಹಾವೇರಿ : ಮಾಹಾಮಾರಿ ಕಿಲ್ಲರ್ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಈ ಕಿಲ್ಲರ್ ವೈರಸ್ ಇಬ್ಬರು ವಯೊವೃದ್ಧರನ್ನು ಬಲಿ ಪಡೆದಿದೆ. ಕೊರೋನಾ ರೋಗದಿಂದ ಸಹೋದರರಿಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಾವೇರಿ ತಾಲೂಕಿನ ಕುಳೆನೂರು ಗ್ರಾಮದಲ್ಲಿ 70 ವರ್ಷದ ಅಣ್ಣಾ ಮತ್ತು 60 ವರ್ಷದ ತಮ್ಮಾ ಕೊರೋನಾ ರೋಗಕ್ಕೆ ತುತ್ತಾಗಿ ಇಂದು ಹೃದಯಾಘಾತವಾಗಿದೆ. ಇಂದು ಬೆಳಗಿನ ಜಾವ ಅಣ್ಣಾ ಹುಬ್ಬಳ್ಳಿಯ ಕೀಮ್ಸನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳಿದ ತಮ್ಮನಿಗೂ ಹೃದಯಾಘಾತವಾಗಿದೆ. ತಕ್ಷಣವೇ ಹಾವೇರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ನಂತರ ರಾಪೀಡ್ ಪರೀಕ್ಷೆಯಲ್ಲಿ ಮೃತನಿಗೆ ಕೊರೋನಾ ಇರುವುದು ಧೃಡ ಪಟ್ಟಿದೆ. ಈ ಸುದ್ದಿ ಈಗ ಗ್ರಾಮದ ಜನರಲ್ಲಿ ಒಂದು ಕಡೆ ಆತಂಕ ಸೃಷ್ಟಿ ಮಾಡಿದ್ದರೆ ಇನ್ನೊಂದು ಕಡೆ ಸಾವಿನಲ್ಲೂ ಅಣ್ಣ ತಮ್ಮ ಒಂದಾದರೂ ಎಂದು ಮರಮರ ಮರುಗಿದ್ದಾರೆ. ಕೋವಿಡ್ ನಿಯಮದಂತೆ ಗ್ರಾಮದ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಜ್ಜು ಮಾಡಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆಸಿದೆ. ಆದಷ್ಟು ಬೇಗ ಈ ಮಾಹಾಮಾರಿ ರೋಗ ತೊಲಗಲಿ ಎಂದು ಕುಳೆನೂರು ಗ್ರಾಮದ ಜನರು ಆ ದೇವರಲ್ಲಿ ಮೋರೆ ಇಟ್ಟರು.

Exit mobile version