ಮೈಸೂರು : ವಿಶ್ವವಿಖ್ಯಾತ ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿ ಆಗಮನವಾಗಿದೆ. ದಕ್ಷಿಣ ಆಫ್ರಿಕಾದಿಂದ ಚೀತಾ ಆಗಮನವಾಗಿದೆ. ಪ್ರಾಣಿ ವಿನಿಮಯ ಯೋಜನೆ ಮೂಲಕ ಮೈಸೂರು ಮೃಗಾಲಯಕ್ಕೆ ಚೀತಾ ಬಂದಿದೆ. ಕೆಲವೇ ದಿನಗಳಲ್ಲಿ ಪ್ರಾಣಿ ಪ್ರಿಯರ ಸ್ಟಾರ್ ಅಟ್ರಾಕ್ಷನ್ ಆಗಲಿದೆ ಆಫ್ರಿಕನ್ ಚೀತಾ.
ಸಿಂಗಾಪುರ್ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ಬಂದಿರುವ ಆಫ್ರಿಕನ್ ಚೀತಾ ಆರೋಗ್ಯದಿಂದ ಇದೆ. ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡಲಾಗುವುದೆಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.