Site icon PowerTV

ಬಾವಿ ಕಟ್ಟೆಗೆ ಬಡಿದ ಲಾರಿ; ಅದೃಷ್ಟವಶಾತ್ ಅಪಾಯದಿಂದ ಪಾರು..!

ದಕ್ಷಿಣ ಕನ್ನಡ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಬಾವಿ ಕಟ್ಟೆಗೆ ಡಿಕ್ಕಿ ಒಡೆದು, ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾದ ಘಟನೆ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಆಗಮಿಸುತ್ತಿದ್ದ ಲಾರಿಯು ಪುತ್ತೂರು ತಾಲೂಕಿನ ಶೇಖಮಲೆಯ ಅಟಲ್ ನಗರದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕವೇ ಇದ್ದ ಬಾವಿ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಾವಿಯ ಕಾಂಕ್ರೀಟ್ ತಡೆಗೋಡೆಯೇ ಒಡೆದು ಚೂರಾಗಿದೆ. ಆದರೆ ಬಾವಿಯ ಮೇಲ್ಭಾಗದಲ್ಲಿಯೇ ಲಾರಿ ನಿಂತುಕೊಂಡ ಪರಿಣಾಮ ಚಾಲಕ ಹಾಗೂ ನಿರ್ವಾಹಕ ತಕ್ಷಣವೇ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂಭಾಗವೂ ಭಾಗಶಃ ನಜ್ಜುಗುಜ್ಜಾಗಿದೆ‌. ಲಾರಿಯ ಕೆಳಭಾಗದ ಪ್ಲೇಟ್ ತುಂಡಾದ ಪರಿಣಾಮ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡಿದ್ದು ಆದರಿಂದ ಹೆಚ್ಚಿನ ಅನಾಹುತ ತಪ್ಪಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು

Exit mobile version