Site icon PowerTV

ಗ್ರಾಮಸ್ಥರ ಶ್ರಮದಾನ | ಡಿ.26 ನಾಲೆಗೆ ಹೇಮಾವತಿ ಹರಿವು

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ದೊಡ್ಡಮಧುರೆ ಗ್ರಾಮದ ಡಿ.26 ನಾಲೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು, ಅಂದು 50 ಕ್ಕೂ ಹೆಚ್ಚು ಟ್ರಾಕ್ಟರ್ ಲೋಡ್ ಮಣ್ಣನ್ನ ಗ್ರಾಮಸ್ಥರು ಕಾಲುವೆಯಿಂದ ಹೊರಹಾಕಿದ್ದರು. ಅಂದಿನ ಶ್ರಮದ ಫಲವಾಗಿ ಇಂದು ಹೇಮಾವತಿ ನಾಲೆಯಿಂದ ದೊಡ್ಡಮಧುರೆ ಕೆರೆಗೆ ನೀರು ಹರಿಸಲಾಗಿದೆ.

ಅಷ್ಟೇ ಅಲ್ಲದೆ ಆಗಸ್ಟ್ ಮೂರರಂದು ದೊಡ್ಡಮಧುರೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ 10 ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿದರು. ಇಂದು ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಡಿ.26 ನಾಲೆಗೆ ಕಾಲುವೆ ಗೇಟ್ ತೆರೆಯುವ ಮೂಲಕ ನೀರು ಹರಿಸಿದ್ದಾರೆ. ಇದರಿಂದಾಗಿ ಸಂತೋಷಗೊಂಡಿರುವ ಜನತೆ ಆರಂಭದಿಂದಲೂ ಜೊತೆಯಾಗಿದ್ದ ಪವರ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.

-ಹೇಮಂತ್ ಕುಮಾರ್

Exit mobile version