Site icon PowerTV

ಚಳ್ಳಕೆರೆಯಲ್ಲಿ ಮೂವರ ಬರ್ಬರ ಹತ್ಯೆ

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ‌ ಮೂವರ ಭೀಕರ ಹತ್ಯೆ ನಡೆದಿದೆ. ಹಂದಿಗಳನ್ನು ಸಾಕಣಿಕೆ ಮಾಡುತ್ತಿದ್ದ ಮಾರೇಶ್, ಸೀನಪ್ಪ ಹಾಗು ಯಲ್ಲೇಶ್ ಮೃತ ದುರ್ದೈವಿಗಳು.

 ದುಷ್ಕರ್ಮಿಗಳು ಮೂವರ ಮೇಲೆ ಖಾರದ ಪುಡಿ ಎರಚಿ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದ್ದು, ಹಂದಿ ಕದಿಯಲು ಬಂದಿದ್ದ ಖದೀಮರು ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. 

ನಾಹಕನಹಟ್ಟಿ‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version