Site icon PowerTV

ಚಿಕಿತ್ಸೆ ಸಿಗದೆ ಯುವಕ ಸಾವು | ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ಮೈಸೂರು : ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಯುವಕ ಮೃತಪಟ್ಟಿದ್ದಾನೆ. 

ಮಂಡ್ಯದ ಶರತ್ (21) ಮೃತ ದುರ್ದೈವಿ. ಶನಿವಾರ ಮಧ್ಯರಾತ್ರಿಯಿಂದ ಪೋಷಕರು ಶರತ್​ನನ್ನು ಕರೆದುಕೊಂಡು ಆ್ಯಂಬುಲೆನ್ಸ್​​ನಲ್ಲಿ ನಾನಾ ಆಸ್ಪತ್ರೆಗಳಿಗೆ ಅಲೆದಾಡಿದರೂ ಎಲ್ಲೂ ಚಿಕಿತ್ಸೆ ಸಿಗಲಿಲ್ಲ ಎನ್ನಲಾಗಿದೆ.  ಕೊನೆಗೆ ಮೈಸೂರಿನ ಕೆ.ಆರ್ ನಗರದ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ. 

ಕೊರೋನಾ ಕಾರಣ ನೀಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿರುವ ಪೋಷಕರು ವೈದ್ಯರ ವರ್ತನೆಯಿಂದ ಅಸಮಧಾನಗೊಂಡಿದ್ದು, ಮಗನಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

 

Exit mobile version