Wednesday, August 27, 2025
HomeUncategorizedನಾಟಿ ಮಾಡಿ ಗಮನಸೆಳೆದ ಶಾಸಕ

ನಾಟಿ ಮಾಡಿ ಗಮನಸೆಳೆದ ಶಾಸಕ

ಕೊಪ್ಪಳ : ಭತ್ತ ಸಸಿ ನಾಟಿ ಮಾಡುವ ಯಂತ್ರವನ್ನು ಚಾಲನೆ ಮಾಡುವ ಮುಖಾಂತರ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಸ್ಥಳೀಯ ರೈತರ ಗಮನ ಸೆಳೆದಿದ್ದಾರೆ.

 ಕನಕಗಿರಿ ಕ್ಷೇತ್ರದ ಹಣವಾಳ ಗ್ರಾಮದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ಹಾಗೂ ಗಂಗಾವತಿಯ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಭತ್ತ ಸಸಿ‌ ನಾಟಿ ಮಾಡುವ ಯಂತ್ರ ತರಬೇತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಬಸವರಾಜ ದಡೆಸೂಗೂರು ತಾವೇ ಭತ್ತದ ಗದ್ದೆಗೆ ಇಳಿದು ಯಂತ್ರವನ್ನು ಚಾಲನೆ ಮಾಡುವ ಮುಖಾಂತರ ಭತ್ತ ಸಸಿ ನಾಟಿ‌ ಮಾಡಿ ನೆರದಿದ್ದ ಜನರನ್ನು ಅಚ್ಚರಿಗೊಳಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿ.ಪಂ.ಅಧ್ಯಕ್ಷ ವಿಶ್ವನಾಥ್ ರೆಡ್ಡಿ  ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

-ಶುಕ್ರಾಜ ಕುಮಾರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments