Site icon PowerTV

ಕ್ರಿಕೆಟ್ ದೇವರ ಸೆಂಚುರಿಗೆ 30 ವರ್ಷ..!

ಭಾರತೀಯ ಕ್ರಿಕೆಟ್​​ನ ಜೀವಂತ ದಂತಕಥೆ, ಗಾಡ್ ಆಫ್ ಕ್ರಿಕೆಟ್ ಸಚಿನ್ ಗೆ ಇಂದು ಅವಿಸ್ಮರಣೀಯ ದಿನ. ಯಾಕಂದ್ರೆ ಸಚಿನ್ ಕ್ರಿಕೆಟ್ ಕರಿಯರ್ ನ ಮೊಟ್ಟ ಮೊದಲ ಸೆಂಚುರಿ ಬಾರಿಸಿದ್ದು ಇವತ್ತೇ.

ಬರೋಬ್ಬರಿ 30 ವರ್ಷಗಳ ಹಿಂದೆ ಅಂದ್ರೆ, ಆಗಸ್ಟ್ 14, 1990 ರಂದು ಸಚಿನ್ ತಮ್ಮ ಮೊದಲ ಶತಕ ಸಿಡಿಸಿದ್ರು. ಆಗ ಅವರ ವಯಸ್ಸು ಜಸ್ಟ್ 17. ಇಂಗ್ಲೆಂಡ್ ವಿರುದ್ಧ ಭಾರತ ಓಲ್ಡ್ ಟ್ರಫರ್ಡ್ ನಲ್ಲಿ ಕಣಕ್ಕಿಳಿದಿತ್ತು. ಈ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ 119 ರನ್ ಬಾರಿಸುವ ಮೂಲಕ ಸಚಿನ್​ ಸಂಭ್ರಮಿಸಿದ್ರು. ಜೊತೆಗೆ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಗೂ ಭಾಜನರಾದ್ರು. ಈ ಬಗ್ಗೆ ಬಿಸಿಸಿಐ ಕೂಡ ತನ್ನ ಅಫಿಶಿಯಲ್ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಚಿನ್ ಗೆ ಅಭಿನಂದನೆಗಳನ್ನು ಸಲ್ಲಿಸಿದೆ.

 

Exit mobile version