Site icon PowerTV

ಖತರ್ನಾಕ್ ಕಳ್ಳ ಫೈರೋಜ್​ ಅರೆಸ್ಟ್​

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಖತರ್ನಾಕ್ ಕಳ್ಳ ಫೈರೋಜ್ ಜಫ್ರಿಯನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಫೈರೋಜ್ ಜಫ್ರಿ ರಾಜೇಸಾಬ(38) ಬಂಧಿತ ಆರೋಪಿ.ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಶೆಟರ್ಸ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಿರುವ ಪೊಲೀಸರು,ಬಂಧಿತನಿಂದ ನಗದು ಹಣ ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ.

ಕ್ಲಬ್ ರಸ್ತೆ ವಿನಾಯಕ ಮೆಡಿಕಲ್ ಶಾಪ್ ಹಾಗೂ ಮಂತ್ರಾ ಹೊಟೇಲ್ ಬಳಿ ಇರುವ ಸಸ್ಯಹಾರಿ ಹೊಟೇಲ್ ಶೆಟರ್ಸ್ ಮುರಿದು ಕಳ್ಳತನ ಮಾಡಿದ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೇಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Exit mobile version