Site icon PowerTV

ಅರೆಸ್ಟ್ ಮಾಡಿದ್ರೆ ಮಾಡಲಿ, ಗಣೇಶೋತ್ಸವ ಆಚರಿಸಿಯೇ ಆಚರಿಸ್ತೀವಿ : ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ :  ಅರೆಸ್ಟ್ ಮಾಡಿದ್ರೆ ಮಾಡಲಿ, ನಾವು ಸಾರ್ವಜನಿಕ ಗಣೇಶೋತ್ಸವ ಆಚರಿಸಿಯೇ ಆಚರಿಸ್ತೀವಿ ಅಂತ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಕೊವಿಡ್ ನೆಪ ಇಟ್ಟುಕೊಂಡು ಗಣೇಶ ಹಬ್ಬವನ್ನು ಸರ್ಕಾರ ಬ್ಯಾನ್ ಮಾಡಿದೆ. ಬೇರೆ ಎಲ್ಲವನ್ನೂ ಓಪನ್ ಮಾಡಿ, ಸಾರ್ವಜನಿಕ ಗಣೇಶೋತ್ಸವ ಬ್ಯಾನ್ ಮಾಡಿದ್ದು ಏಕೆ? ಗುಡಿಗಳಿಗೆ ಹಾಕಿರುವ ನಿಯಮವನ್ನು ನಾವು ಪಾಲನೆ ಮಾಡುತ್ತೇವೆ. ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. 

ಕೆಂಪು ಬ್ರಿಟಿಷರ ವಿರುದ್ಧ ಧ್ವನಿ ಎತ್ತಲು ಗಣೇಶನನ್ನ ಬಾಲ ಗಂಗಾಧರ ತಿಲಕ್​ ಪ್ರತಿಷ್ಟಾಪನೆ ಮಾಡಿದ್ದರು. ಆದ್ರೆ ಈಗ ಬಿಜೆಪಿಯ ಕಪ್ಪು ಹೋರಾಟಗಾರರಿಂದ ಗಣೇಶೋತ್ಸವ ಬಂದ್ ಆಗಿದೆ. ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ‌ಮಾಡಲಾಗುತ್ತಿದ್ದು, ಸಂಪ್ರದಾಯವನ್ನು ನಿಲ್ಲಿಸಬಾರದು, ಮಣ್ಣಿನ ಗಣಪತಿ ವಿಗ್ರಹವನ್ನೇ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು.
ಸರ್ಕಾರಕ್ಕೆ ನಾವು ಸೋಮವಾರ ಎಚ್ಚರಿಕೆ ಕೊಡ್ತೀವಿ, ಎಚ್ಚರಿಕೆಗೆ ಬಗ್ಗದಿದ್ದರೆ, ನಾವು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿ ಗಣಣೇಶನನ್ನು ಪ್ರತಿಷ್ಟಾಪನೆ ಮಾಡ್ತೀವಿ. ಬೇಕಾದರೆ ನಮ್ಮನ್ನ ಬಂಧಿಸಲಿ ಎಂದರು.

Exit mobile version