Site icon PowerTV

ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್

ಗದಗ : ಶಾಸಕ ಜಮೀರ್ ಅಹಮ್ಮದ್ ಖಾನ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ ಎಂದು ಸಚಿವ ಜಗದೀಶ್​ ಶೆಟ್ಟರ್ ಗುಡುಗಿದ್ದಾರೆ. 

ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ವೇಳೆ ಪೊಲೀಸರ ಗುಂಡೇಟಿಂದ ಮೃತಪಟ್ಟವರ ಕುಟುಂಬಗಳಿಗೆ ಜಮೀರ್ ಅಹಮ್ಮದ್ ಖಾನ್ ಪರಿಹಾರ ನೀಡಿಬೇಕೆಂಬ ವಿಚಾರಕ್ಕೆ ಸಂಬಂಧಟ್ಟಂತೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಅವ್ರಿಗೆ ಬರೀ ಜಾತಿ, ಧರ್ಮ ಅನ್ನೋದೇ ಮಾತ್ರ ಕಾಳಜಿ ಇದೆ. ಹೀಗೆ ಪರಿಹಾರ ನೀಡಿದ್ರೆ  ಗಲಭೆ ಮಾಡೋರಿಗೆ ಪ್ರಚೋದನೆ ನೀಡಿದಂತೆ ಆಗುತ್ತೆ. ಸಮಾಜ, ಸಮಾಜದ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಒಬ್ಬ ರಾಜಕಾರಣಿಯಾಗಿ, ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ಯಾವಾಗಲೂ ವಿಮುಖರಾಗಿ ನಡೆಯುವ ಕೆಲಸ ಜಮೀರ್ ಮಾಡುತ್ತಿದ್ದಾರೆ ಅಂತ ಶೆಟ್ಟರ್ ವಾಗ್ದಾಳಿ ನಡೆಸಿದ್ರು.

ಇದ್ರಲ್ಲಿ ಕೋಮು ದ್ವೇಷ ಮಾಡುವ, ಜೊತೆಗೆ ಜಾತಿ ಇಟ್ಟುಕೊಂಡು ವಾದ ಮಾಡುವ ಕೆಲಸ ಇದೆ. ಜಮೀರ್ ಮಾಡುವ ಕೆಲಸ ಸಮಾಜಕ್ಕೆ ಮಾರಕವಾಗಲಿದೆ ಎಂದರು.

ಇನ್ನು ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದ್ರು. 

ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಸಹ ಗದಗನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಂದೊಂದು ಪೂರ್ವ ನಿಯೋಜಿತ ಸಂಚಾಗಿದ್ದು ಕೇವಲ ಒಂದು ವಾಟ್ಸ್​ಆ್ಯಪ್​​ ಮೆಸೇಜ್ ಗೆ ಸಾಕಷ್ಟು ಜನ್ರು ಸೇರೋದು ಅಸಾಧ್ಯ.

2 ಸಾವಿರದಿಂದ 3 ಸಾವಿರ ಜನ್ರು ಸೇರುತ್ತಾರೆ ಎಂದ್ರೆ ಹೇಗೆ ಸಾಧ್ಯ. ಹೀಗಾಗಿ ಇದೊಂದು ಪೂರ್ಣ ನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದ್ರು ಕಾಂಗ್ರೆಸ್ ಪಕ್ಷ ಖಂಡಿಸುತ್ತಿಲ್ಲಾ.ಹಿಂದಿನ ಕಾಂಗ್ರೆಸ್ ಸರ್ಕಾರ ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆ ಮೇಲಿನ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿತ್ತು ಎಂದು ಹರಿಹಾಯ್ದರು. 

ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ಭಯೋತ್ಪಾದನೆಗೆ ನಿಕಟವಾದ ಸಂಪರ್ಕ ಇದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿದೆ ಅಂತ‌ ತಿಳಿಸಿದ್ರು. ಇನ್ನು ಸಂಘಟನೆಗಳ ನಿಷೇಧ ಕುರಿತು ಗುರುವಾರ ಕ್ಯಾಬಿನೆಟ್ ನಲ್ಲಿ ನಿರ್ಧಾರವಾಗುತ್ತದೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಸ್ತಿಯನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ವಸೂಲಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದರು. 

-ಮಹಾಲಿಂಗೇಶ್ ಹಿರೇಮಠ

Exit mobile version