Site icon PowerTV

ಗೋಲಿಬಾರ್’ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ್ರೆ ಉಗ್ರ ಹೋರಾಟ – VHP ಎಚ್ಚರಿಕೆ..!

ಮಂಗಳೂರು : ಬೆಂಗಳೂರು ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಿದ್ದಲ್ಲಿ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ವಿಶ್ವ‌ ಹಿಂದೂ ಪರಿಷತ್ ಎಚ್ಚರಿಸಿದೆ. ಬೆಂಗಳೂರು ಗಲಭೆ ಪ್ರಕರಣ ಹಾಗೂ ಪೊಲೀಸರ ಮೇಲಿನ ದಾಳಿಯನ್ನ ಖಂಡಿಸಿ ಮಂಗಳೂರು ನಗರದ ಪಿವಿಎಸ್ ಸರ್ಕಲ್ ಬಳಿ ನಡೆಸಿದ ಪ್ರತಿಭಟನೆಯಲ್ಲಿ VHP ನಾಯಕರು ಎಚ್ಚರಿಸಿದ್ದಾರೆ. ಮೃತಪಟ್ಟವರಿಗೆ ಪರಿಹಾರ ನೀಡುವಂತೆ SDPI ಕೇಳಿಕೊಂಡಿದೆ. ಹಾಗೇನಾದರೂ ಪರಿಹಾರ ನೀಡಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಅಲ್ಲದೇ SDPI, PFI ವಿರುದ್ಧ ಹರಿಹಾಯ್ದ VHP ನಾಯಕರು, ತಕ್ಷಣವೇ ಸಂಘಟನೆಯನ್ನ ನಿಷೇಧಿಸುವಂತೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಎಂ.ಬಿ‌. ಪುರಾಣಿಕ್ ನೇತೃತ್ವದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದು ಸಂಘಟನೆ ನಿಷೇಧಕ್ಕೆ ಆಗ್ರಹಿಸಿದರು.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

Exit mobile version