Site icon PowerTV

ಲಾಂಗ್ ತೋರಿಸಿ ಹಾಡುಹಗಲೇ ಕಳ್ಳತನಕ್ಕೆ ಯತ್ನ

ಚಿಕ್ಕಮಗಳೂರು : ಚಿನ್ನದ ಅಂಗಡಿಯಲ್ಲಿ ಮೂರು ಚೈನ್ ನೊಂದಿಗೆ ವ್ಯಕ್ತಿ ಪರಾರಿ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಗರದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಬೆಳಗ್ಗೆ ಈ ಘಟನೆ ನಡೆದಿದ್ದು, ನಾಗಪ್ಪ ಶೆಟ್ಟಿ ಎಂಬುವರ ಬಂಗಾರದ ಅಂಗಡಿಯಲ್ಲಿ ವ್ಯಕ್ತಿಯೋರ್ವನಿಂದ ದರೋಡೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರ ಚಿನ್ನದ ಅಂಗಡಿಯಲ್ಲಿ, ಲಾಂಗ್ ತೋರಿಸಿ ದರೋಡೆ ಮಾಡಿದ್ದು, ಲಾಂಗ್ ನೋಡಿ ಅಂಗಡಿಯಲ್ಲಿದ್ದ ಮಹಿಳಾ ಕೆಲಸಗಾರರು ಬೆದರಿದ್ದಾರೆ.
ಆದರೆ ಸ್ಥಳಿಯರಿಂದ ಕಳ್ಳನನ್ನ ಹಿಡಿಯುವ ಪ್ರಯತ್ನ ವಿಫಲವಾಗಿದೆ, ಅಲ್ಲದೇ ದರೋಡೆಕೋರನ ಮೇಲೆ ಚೇರ್ ಗಳಿಂದ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೂ ಆತ ಲಾಂಗ್ ಹಾಗೂ ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾನೆ.ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಶೋಧ ಕಾರ್ಯದಲ್ಲಿ ಶೃಂಗೇರಿ ಪೊಲೀಸರು ನಿರತರಾಗಿದ್ದಾರೆ.

-ಸಚಿನ್ ಶೆಟ್ಟಿ

Exit mobile version