Site icon PowerTV

ಕೆ.ಜಿ ಹಳ್ಳಿ ಗಲಭೆ ಹಿಂದಿದೆ ರಾಜಕೀಯ ಪಿತೂರಿ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬೆಂಗಳೂರಿನ ಕೆಜಿ ಹಳ್ಳಿ ಘಟನೆ ಹಿಂದೆ ರಾಜಕೀಯ ಪಿತೂರಿ ಇದ್ದು, ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವುದು ಖಂಡನಾರ್ಹ. ಯಾರು ಇಂಥಾ ಹೀನ‌ಕೃತ್ಯಗಳನ್ನು ಎಸಗಬಾರದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. 

ಕೆಜಿ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಧರ್ಮಗುರುಗಳಿಗೆ ಗೌರವ ಕೊಡುವದು ನಮ್ಮ ಧರ್ಮ. ಧರ್ಮಗುರುಗಳ ವಿರುದ್ಧ ಅವಹೇಳನ ಮಾಡಿದವರ ಮೇಲೆ ಸೂಕ್ತ ಕ್ರಮ‌ಕೈಗೊಳ್ಳಬೇಕು. ಹಾಗಾನೇದ್ರು ಅವಹೇಳನ ಮಾಡಿದ್ರೆ ದೂರು ನೀಡಲಿ‌. ಅದು ಬಿಟ್ಟು,ಕಾನೂನು ಕೈಗೆ ತೆಗೆದುಕೊಂಡ್ರೆ ಹೇಗೆ? ಠಾಣೆಯ ಮೇಲೆ, ಶಾಸಕರ ಮನೆ ಮೇಲೆ ದಾಳಿ ಮಾಡೋದು ಎಷ್ಟು ಸರಿ?
ಅಂತವರ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಂಡಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

Exit mobile version