Site icon PowerTV

ಸಂಸದೆ ಸುಮಲತಾ ಬೇಜವಾಬ್ದಾರಿ ನಡವಳಿಕೆ : ಬಿಸಿಯೂಟ ನೌಕರರ ಆಕ್ರೋಶ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ನಡೆಗೆ ಅಸಮಾಧಾನಗೊಂಡಿರುವ ಮಂಡ್ಯದ ಬಿಸಿಯೂಟ ನೌಕರರು, ಸಂಸದೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮಂಡ್ಯ ಜಿಲ್ಲಾ ಪಂಚಾಯತ್ ಎದುರು ಬಿಸಿಯೂಟ ನೌಕರರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.ಇಂದು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಚುನಾವಣೆ ನಿಗಧಿಯಾಗಿತ್ತು.

ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಂಸದೆ ಸುಮಲತಾ ಅಂಬರೀಶ್ ಕೂಡ ಮಂಡ್ಯ ಜಿಪಂ ಆವರಣಕ್ಕೆ ಆಗಮಿಸಿದ್ರು. ಸುಮಲತಾ ಆಗಮಿಸಿದಾಗ, ಮಧ್ಯಾಹ್ನ ಊಟಕ್ಕೆ ತೆರಳುವಾಗ ಮತ್ತು ವಾಪಸ್ ಊಟ ಮುಗಿಸಿ ಬಂದಾಗ ಒಟ್ಟು ಮೂರು ಸಲ ಪ್ರತಿಭಟನಾ ನಿರತ ಮಹಿಳೆಯರ ಮುಂದೆಯೇ ಸುಮಲತಾ  ಓಡಾಡಿದ್ದಾರೆ.ಒಮ್ಮೆಯೂ ಸಂಸದೆ ಉಪವಾಸ ಸತ್ಯಾಗ್ರಹ ಮಾಡ್ತಿರೋ ಮಹಿಳಾ ನೌಕರರ ಸಮಸ್ಯೆ ಆಲಿಸೋ ಮನಸ್ಸೇ ಮಾಡಲಿಲ್ಲ.

ಸಂಸದೆ ಸುಮಲತಾ ಅಂಬರೀಶ್ ಕೂಡ ಒಬ್ಬ ಮಹಿಳೆ. ಮಹಿಳೆಯರು ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ. ಅವರ ಸಮಸ್ಯೆ ಆಲಿಸಿ, ಮಹಿಳೆಯರ ಬೇಡಿಕೆ ಸ್ಪಂಧಿಸುವ ಮನೋಭಾವ ತೋರಬೇಕಿತ್ತು.ಅದ್ಯಾವುದನ್ನೂ ಮಾಡದೇ, ಮೂರು ಸಲವೂ ತಮ್ಮ ಕಾರು ಹತ್ತಿ ಹೊರಟ ಸಂಸದರದ್ದು ಬೇಜವಾಬ್ದಾರಿ ನಡೆ ಅಂತಾ ಆರೋಪಿಸಿದರು. 5-10 ಅಡಿ ಅಂತರದಲ್ಲೇ ಪ್ರತಿಭಟನಾ ನಿರತ ಮಹಿಳೆಯರ ಸಮಸ್ಯೆ ಆಲಿಸದೆ, ಕಂಡು ಕಾಣದಂತೆ ಹೊರಟ ಸಂಸದೆ ನಡೆ ಖಂಡಿಸಿ, ಸಂಸದರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

KRS ಭರ್ತಿಗೆ ಇನ್ನೆರಡೇ ಅಡಿ ಬಾಕಿ ; ಡ್ಯಾಂ ವೀಕ್ಷಿಸಿದ ಸಂಸದೆ ಸುಮಲತಾ

Exit mobile version